ಕೆಸಿಎಫ್ ಅಲ್-ಐನ್ ಝೋನ್ ಸಮಿತಿಗೆ ನೂತನ ಸಾರಥ್ಯ

Update: 2019-07-30 18:11 GMT

ಅಲ್-ಐನ್, ಜು.30: ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್-ಐನ್ ಝೋನ್ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೆಸಿಎಫ್ ಕಚೇರಿಯಲ್ಲಿ ಝೋನ್ ಅಧ್ಯಕ್ಷ ಮುಸ್ತಾಕ್ ತುಂಬೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಯುಎಇ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮುದುಂಗಾರ್ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಜಲೀಲ್ ನಿಝಾಮಿ ಮುನ್ನುಡಿ ಭಾಷಣ ಮಾಡಿದರು. ಚುನಾವಣಾಧಿಕಾರಿ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಪ್ರಸ್ತುತ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಗೆ ಚಾಲನೆ ನೀಡಿದರು.

ನೂತನ‌ ಸಮಿತಿಯ ಪದಾಧಿಕಾರಿಗಳು:

ಅಧ್ಯಕ್ಷರಾಗಿ ಹಾಫಿಲ್ ಸಫ್ವಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಮುದುಂಗಾರ್, ಕೋಶಾಧಿಕಾರಿಯಾಗಿ ಮುಸ್ತಾಕ್ ತುಂಬೆ, ಸಂಘಟನಾ ವಿಭಾಗ ಅಧ್ಯಕ್ಷರಾಗಿ ಅಬ್ದುಲ್ ರಹೀಂ ಸಕಲೇಶ್'ಪುರ, ಕಾರ್ಯದರ್ಶಿಯಾಗಿ ಹಂಝ ಕೊಡಗು, ಶಿಕ್ಷಣ ವಿಭಾಗ ಅಧ್ಯಕ್ಷರಾಗಿ ಉಸ್ಮಾನ್ ಸಖಾಫಿ, ಕಾರ್ಯದರ್ಶಿಯಾಗಿ ಮುನೀರ್ ಉಳ್ಳಾಲ, ವೆಲ್ಫೇರ್ ವಿಭಾಗ ಅಧ್ಯಕ್ಷರಾಗಿ ಬಶೀರ್ ಬೈಕಂಪಾಡಿ, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಕಂಬಳಬೆಟ್ಟು, ಆಡಳಿತ ವಿಭಾಗ ಅಧ್ಯಕ್ಷರಾಗಿ ಉಮರ್ ಕೊಪ್ಪ, ಕಾರ್ಯದರ್ಶಿಯಾಗಿ ಇಮ್ತಿಯಾಝ್ ಬೈರಿಕಟ್ಟೆ, ಇಹ್ಸಾನ್ ವಿಭಾಗ, ಅಧ್ಯಕ್ಷರಾಗಿ ಇಬ್ರಾಹಿಂ ಉಳ್ಳಾಲ, ಕಾರ್ಯದರ್ಶಿಯಾಗಿ ಫೈಝಲ್‌ ನಾಟೆಕಲ್, ಪಬ್ಲಿಕೇಷನ್ ವಿಭಾಗ ಅಧ್ಯಕ್ಷರಾಗಿ ಝಿಯಾದ್ ಉಳ್ಳಾಲ, ಕಾರ್ಯದರ್ಶಿಯಾಗಿ ಅಶ್ರಫ್ ನಾಟೆಕಲ್ ಆಯ್ಕೆಯಾದರು.

ನೂತನ ಸಮಿತಿಗೆ ಆಯಾ ವಿಭಾಗದ ನಾಯಕರ ಕೆಲಸ ಕಾರ್ಯಗಳ ಬಗ್ಗೆ ತರಗತಿ ನೀಡುವ ಬಗ್ಗೆ ರಾಷ್ಟ್ರೀಯ ಸಮಿತಿ ಆಯೋಜಿಸಿದಂತಹ ಖವಾಯಿದ- 2019 ನ್ನು ಕೆಸಿಎಫ್ ಅಂತರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಎಂಎಚ್ ಹಮೀದ್ ಈಶ್ವರಮಂಗಿಲರವರು ನೆರವೇರಿಸಿದರು.

ನೂತನ ಸಮಿತಿಗೆ ರಾಷ್ಟ್ರೀಯ ನಾಯಕರಾದ ಇಬ್ರಾಹಿಂ ಬ್ರೈಟ್ ಮಾರ್ಬಲ್, ಮೂಸಾ ಹಾಜಿ ಬಸರ, ಶಾಹುಲ್‌ ಹಮೀದ್ ಸಖಾಫಿ, ಅಬ್ದುಲ್ ರಹೀಂ ಕೋಡಿ, ಶಾಫಿ ಸಖಾಫಿ ಕೊಂಡಂಗೇರಿ, ರಫೀಕ್ ಕಲ್ಲಡ್ಕ ಶುಭಹಾರೈಸಿದರು.

ಕಾರ್ಯಕ್ರಮವನ್ನು ಮುಸ್ತಫಾ ಮುದುಂಗಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಮುದುಂಗಾರ್ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News