ಕೆಸಿಎಫ್ ಮದೀನಾ ಖಲೀಫಾ ಝೋನ್ ಸಮಿತಿ ಮಹಾ ಸಭೆ

Update: 2019-07-31 08:07 GMT

ದೋಹಾ: ಅನಿವಾಸಿ ಕನ್ನಡಿಗರ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕತರ್ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿರುವ ಮದೀನಾ ಖಲೀಫಾ ಝೋನ್ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ದೋಹಾದಲ್ಲಿ ನಡೆಯಿತು.

ಝೋನ್ ಅಧ್ಯಕ್ಷ ಹಸನ್ ಪುಂಜಾಲಕಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಅಬ್ದುಲ್ ಅಝೀಝ್ ಮದನಿ ಕಿನ್ಯರವರ ದುಆದೊಂದಿಗೆ ಪ್ರಾರಂಭವಾಯಿತು. ರಾಷ್ತ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ರಹೀಂ ಸಅದಿ ಪಾಣೆಮಂಗಳೂರು ಉದ್ಘಾಟಿಸಿದರು. ಶಿಕ್ಷಣ ವಿಭಾಗದ ಅಧ್ಯಕ್ಷ ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ವಿಷಯ ಮಂಡಿಸಿದರು.

ಝೋನ್ ಪ್ರಧಾನ ಕಾರ್ಯದರ್ಶಿ ನಝೀರ್ ಮುರ್ನಾಡು ವರದಿ ವಾಚಿಸಿದರು. ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪಾತೂರು, ಇಹ್ಸಾನ್ ವಿಭಾಗ ಅಧ್ಯಕ್ಷ ಅಬ್ದುಲ್ ಸತ್ತಾರ್ ಅಶ್ರಫಿ ಮಠ, ಇಹ್ಸಾನ್ ವಿಭಾಗದ ಕಾರ್ಯದರ್ಶಿ ಅಶ್ರಫ್ ವಳಚ್ಚಿಲ್, ಸಂಘಟನಾ ವಿಭಾಗ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ, ಶಿಕ್ಷಣ ವಿಭಾಗ ಕಾರ್ಯದರ್ಶಿ ಮಿರ್ಷಾದ್ ಕನ್ಯಾನ, ಸದಸ್ಯರಾದ ಖಾಲಿದ್ ಹಿಮಮಿ ಬೋಳಂತೂರು, ಅಝೀಝಿಯಾ ಝೋನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಕೂಳೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ನೂತನ ಸಮಿತಿಗೆ ಚಾಲನೆ ನೀಡಲಾಯಿತು. ಚುನಾವಣಾ ವೀಕ್ಷಕರಾಗಿ ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷ ಯೂಸುಫ್ ಸಖಾಫಿ ಅಯ್ಯಂಗೇರಿ ಆಗಮಿಸಿದ್ದರು. ನೂತನ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಪುಂಜಾಲಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್ ವಳವೂರು ಹಾಗೂ ಕೋಶಾಧಿಕಾರಿಯಾಗಿ ಅಶ್ರಫ್ ಕಾವಲ್ಕಟ್ಟೆ ಆಯ್ಕೆಯಾದರು.

ವಿವಿಧ ವಿಭಾಗದ ಪದಾಧಿಕಾರಿಗಳಾಗಿ ಅಬ್ದುಲ್ ಖಾದರ್ ಕಾಯರ್ತಡ್ಕ (ಅಧ್ಯಕ್ಷರು - ಸಂಘಟನಾ ವಿಭಾಗ) ಸದಕತುಲ್ಲಾ ಕೂಳೂರು (ಕಾರ್ಯದರ್ಶಿ - ಸಂಘಟನಾ ವಿಭಾಗ), ಅಬ್ದುಲ್ ಅಝೀಝ್ ಮದನಿ ಕಿನ್ಯ (ಅಧ್ಯಕ್ಷರು - ಶಿಕ್ಷಣ ವಿಭಾಗ) ಮುಹಮ್ಮದ್ ಶಫೀಖ್ ಉಜಿರೆ (ಕಾರ್ಯದರ್ಶಿ - ಶಿಕ್ಷಣ ವಿಭಾಗ), ಇಬ್ರಾಹಿಂ ಖಲೀಲ್ ಕೆ.ಸಿ.ರೋಡ್ (ಅಧ್ಯಕ್ಷರು - ಸಾಂತ್ವನ ವಿಭಾಗ) ಪಿ.ಎಂ.ಅಶ್ರಫ್ ಕೊಡ್ಲಿಪೇಟೆ (ಕಾರ್ಯದರ್ಶಿ- ಸಾಂತ್ವನ ವಿಭಾಗ), ಅಬ್ದುಲ್ ಖಾದರ್ ಮುಸ್ಲಿಯಾರ್ ಸುನ್ನಂಗಳ (ಅಧ್ಯಕ್ಷರು - ಇಹ್ಸಾನ್ ವಿಭಾಗ) ಮುಈನುದ್ದೀನ್ ಸೂರಲ್ಪಾಡಿ (ಕಾರ್ಯದರ್ಶಿ - ಇಹ್ಸಾನ್ ವಿಭಾಗ) ಹಾಗೂ 16 ಮಂದಿ ಒಳಗೊಂಡ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.  6 ಮಂದಿ ಸದಸ್ಯರನ್ನು ರಾಷ್ಟ್ರೀಯ ಸಮಿತಿ ಕೌನ್ಸಿಲರ್ ಗಳಾಗಿ ಆಯ್ಕೆ ಮಾಡಲಾಯಿತು.

ನಝೀರ್ ಮುರ್ನಾಡು ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಇರ್ಫಾನ್ ವಳವೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News