ಮಾರುತಿ ಸುಝುಕಿ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

Update: 2019-08-02 08:10 GMT

ಹೊಸದಿಲ್ಲಿ, ಅ. 1: ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಝುಕಿಯ ಕಾರು ಮಾರಾಟ ಕಳೆದ 6 ತಿಂಗಳಿಂದ ಸತತ ಇಳಿಕೆಯಾಗಿದ್ದು, ಜುಲೈಯಲ್ಲಿ ಗರಿಷ್ಠ ಇಳಿಕೆ ಕಂಡಿದೆ.

ದೇಶದಲ್ಲಿ ಕಳೆದ ವರ್ಷ ಜುಲೈಯಲ್ಲಿ 10,64,369 ಮಾರುತಿ ಸುಝುಕಿ ಕಾರುಗಳು ಮಾರಾಟ ಹಾಗೂ ರಫ್ತಾದರೆ, ಈ ವರ್ಷ ಇದೇ ತಿಂಗಳಲ್ಲಿ 1,09,264 ಅಂದರೆ ಕಾರುಗಳು ಮಾರಾಟ ಹಾಗೂ ರಫ್ತಾಗಿದೆ ಎಂದು ಮಾರುತಿ ಸುಝುಕಿ ಹೇಳಿದೆ. ಮಾರುತಿ ಸುಝುಕಿಯ ಕಾರುಗಳ ಮಾರಾಟ ಕಳೆದ ವರ್ಷದ 1,54,150ಕ್ಕೆ ಹೋಲಿಸಿದರೆ, ಈ ವರ್ಷ 1,00,006ಕ್ಕೆ ಅಂದರೆ ಶೇ. 35.1ಕ್ಕೆ ಇಳಿಕೆಯಾಗಿದೆ.

ಆಲ್ಟೋ, ಹಾಗೂ ಹಳೆಯ ವ್ಯಾಗನರ್ ಕಾರುಗಳ ಸೇರಿದಂತೆ ಕಿರು ವಿಭಾಗದ ಕಾರುಗಳ ಮಾರಾಟ ಕಳೆದ ವರ್ಷ ಜುಲೈಯ 37,710ಕ್ಕೆ ಹೋಲಿಸಿದರೆ, ಈ ವರ್ಷ ಜುಲೈಯಲ್ಲಿ 11,577ಕ್ಕೆ ಅಂದರೆ ಶೇ. 69ಕ್ಕೆ ಇಳಿಕೆಯಾಗಿದೆ ಎಂದು ಸುಝುಕಿ ಹೇಳಿದೆ. ನ್ಯೂ ವ್ಯಾಗನ್‌ಆರ್2, ಸೆಲರಿಯೊ, ಇಗ್ನಿಷ್, ಸ್ವಿಫ್ಟ್, ಬಲೆನೊ ಸಹಿತ ಮಾರುತಿ ಸುಝುಕಿಯ ಕಾಂಪೆಕ್ಟ್ ವಾಹನಗಳ ವಿಭಾಗದ ಕಾರುಗಳ ಮಾರಾಟ 57,512ಕ್ಕೆ ಅಂದರೆ ಶೇ. 22.7ಕ್ಕೆ ಇಳಿಕೆಯಾಗಿದೆ ಎಂದು ಸುಝುಕಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News