ಕೊಹ್ಲಿ, ತೆಂಡುಲ್ಕರ್ ದಾಖಲೆ ಹಿಂದಿಕ್ಕಿದ ಸ್ಟೀವನ್ ಸ್ಮಿತ್

Update: 2019-08-02 08:10 GMT

ಬರ್ಮಿಂಗ್‌ಹ್ಯಾಮ್, ಆ.2: ಕಳೆದ ವರ್ಷ ದಕ್ಷಿಣ ಆಫ್ರಿಕದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದ ಸ್ಟೀವ್ ಸ್ಮಿತ್ ಗುರುವಾರ ಇಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ದಿಟ್ಟ ಶತಕ ಸಿಡಿಸಿ ಆಸ್ಟ್ರೇಲಿಯ ತಂಡವನ್ನು ಆಧರಿಸಿದರು.

   ಸ್ಮಿತ್ 144 ರನ್ ಗಳಿಸಿ ಔಟಾಗಿದ್ದು, ತನ್ನ 118ನೇ ಇನಿಂಗ್ಸ್‌ನಲ್ಲಿ 24ನೇ ಶತಕ ಪೂರೈಸಿದರು. ವೇಗವಾಗಿ 24ನೇ ಶತಕ ಪೂರೈಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಆಸ್ಟ್ರೇಲಿಯದ ದಂತಕತೆ ಡಾನ್ ಬ್ರಾಡ್ಮನ್ ಕೆಲವೇ ಇನಿಂಗ್ಸ್‌ನಲ್ಲಿ(66)24 ಶತಕ ಪೂರೈಸಿರುವ ಏಕೈಕ ಬ್ಯಾಟ್ಸ್ ಮನ್ ಆಗಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡುಲ್ಕರ್ ಕ್ರಮವಾಗಿ 123 ಹಾಗೂ 125ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ಸ್ಮಿತ್ ಅವರು ಗ್ರೆಗ್ ಚಾಪೆಲ್, ವಿವಿ ರಿಚರ್ಡ್ಸ್ ಹಾಗೂ ಮುಹಮ್ಮದ್ ಯೂಸುಫ್ ಅವರ ದಾಖಲೆಯನ್ನು ಸರಿಗಟ್ಟಿದರು.

ಕಡಿಮೆ ಇನಿಂಗ್ಸ್‌ಗಳಲ್ಲಿ 24ನೇ ಶತಕ ಪೂರೈಸಿದ ಬ್ಯಾಟ್ಸ್‌ಮನ್‌ಗಳು

66-ಡಾನ್ ಬ್ರಾಡ್ಮನ್

118-ಸ್ಟೀವ್ ಸ್ಮಿತ್

123-ವಿರಾಟ್ ಕೊಹ್ಲಿ

125-ಸಚಿನ್ ತೆಂಡುಲ್ಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News