ಜಿ.ನಾರಾಯಣ ಕುಮಾರ್ ರಸ್ತೆ ನಾಮಕರಣ
Update: 2019-08-02 22:20 IST
ಬೆಂಗಳೂರು, ಆ.2: ಬಿನ್ನಿಮಿಲ್ ವೃತ್ತದಿಂದ ಮಾಗಡಿ ರಸ್ತೆ ಟೋಲ್ ಗೇಟ್ ಸಿಗ್ನಲ್‌ವರೆಗಿನ ರಸ್ತೆಗೆ ಜಿ.ನಾರಾಯಣ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹೇಳಿದರು.
ಜಿ.ನಾರಾಯಣ ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ ಮಾತನಾಡಿದ ಅವರು, ಜಿ.ನಾರಾಯಣ ಕುಮಾರ್ ಕನ್ನಡ ಪರ ಚಳುವಳಿಗಳಲ್ಲಿ ಪಾಲ್ಗೊಂಡು ಅನೇಕ ಹೋರಾಟಗಳನ್ನು ಮಾಡಿರುವ ನಾಯಕ, ಬಡಜನರ ಧ್ವನಿಯಾಗಿ ಕೆಲಸ ಮಾಡಿದ್ದರು. ಅಲ್ಲದೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಿಬಿಎಂಪಿಯಲ್ಲಿ ಮೊದಲು ಆಚರಿಸಿದವರು. ಕನ್ನಡ ಪರ ಹೋರಾಟ, ಚಳವಳಿಗಳು, ಕಾರ್ಮಿಕ ಮುಖಂಡರಾಗಿ ಅವಿರತ ಸೇವೆ ಸಲ್ಲಿಸಿದ್ದರು ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಮಾತನಾಡಿ, ಜಿ.ನಾರಾಯಣ ಕುಮಾರ್ ಕನ್ನಡ ಪರ ಹೋರಾಟಗಳಲ್ಲಿ ಭಾಗಿಯಾಗಿ ಕನ್ನಡ ನಾಡಿಗೆ ಶ್ರಮಿಸಿದ್ದರು. ನಾವೆಲ್ಲರೂ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಸಲು ಮುಂದಾಗೋಣ ಎಂದರು.