ಡೆಲ್ಲಿ ಕ್ಯಾಪಿಟಲ್ಸ್‌ಗೆ ಫಿಜಿಯೋ ಪ್ಯಾಟ್ರಿಕ್ ಸೇರ್ಪಡೆ

Update: 2019-08-02 18:55 GMT

ಹೊಸದಿಲ್ಲಿ, ಆ.2: ಟೀಮ್ ಇಂಡಿಯಾದ ಮಾಜಿ ಫಿಜಿಯೊ ಪ್ಯಾಟ್ರಿಕ್ ಫರ್ಹಟ್ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಮೂರು ವರ್ಷಗಳ ಅವಧಿಯ ಗುತ್ತಿಗೆಗೆ ಸಹಿ ಹಾಕಿದ್ದಾರೆ.

 ವಿಶ್ವಕಪ್ ಟೂರ್ನಿಯೊಂದಿಗೆ ಟೀಮ್ ಇಂಡಿಯಾದ ದೀರ್ಘ ಕಾಲದ ನಂಟನ್ನು ಕೊನೆಗೊಳಿಸಿರುವ ಫರ್ಹಟ್ ಈ ಹಿಂದೆ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಕೆಲಸ ಮಾಡಿದ್ದರು. ‘‘ನನಗೆ ಮತ್ತೊಮ್ಮೆ ಐಪಿಎಲ್‌ನೊಂದಿಗೆ ಕೆಲಸ ಮಾಡಲು ತುಂಬಾ ಖುಷಿಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಡೆಲ್ಲಿ ತಂಡ ಸಕಾರಾತ್ಮಕವಾಗಿ ಬದಲಾಗುತ್ತಿದೆ. 2019ರ ಋತುವಿನಲ್ಲಿ ಮೂರನೇ ಸ್ಥಾನ ಪಡೆದಿದೆ’’ ಎಂದು ಆಸ್ಟ್ರೇಲಿಯದ ಫರ್ಹಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News