×
Ad

ಬೆಂಗಳೂರಿನ 25 ಕಡೆ ವೈ-ಫೈ ರೆನ್ ನಿರ್ಮಾಣಕ್ಕೆ ಚಿಂತನೆ

Update: 2019-08-03 20:20 IST

ಬೆಂಗಳೂರು, ಆ.3: ನಗರದ ನಾಗರಿಕರಿಗೆ ಉಚಿತವಾಗಿ ವೈ-ಪೈ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಬಿಬಿಎಂಪಿಯು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ನಗರದ 25 ಪ್ರದೇಶಗಳಲ್ಲಿ ಹೈ ಸ್ಪೀಡ್ ವೈ-ಫೈ ರೆನ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರುತ್ತಿದ್ದು, ಸಿಸ್ಕೋ ಸಂಸ್ಥೆ ನಗರದ 25 ಪ್ರದೇಶಗಳಲ್ಲಿ ಹೈ ಸ್ಪೀಡ್ ವೈ-ಫೈ ರೆನ್ ನಿರ್ಮಿಸಲಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಈ ಯೋಜನೆ ಜಾರಿಗೆ ಬರಲಿದ್ದು, ಜಯನಗರ ಬಸ್ ನಿಲ್ದಾಣ, ಉಡುಪಿ ಗಾರ್ಡನ್ ಸೇರಿದಂತೆ ಹಲವು ಪ್ರದೇಶಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ.

ಎರಡನೆ ಹಂತದಲ್ಲಿ 300 ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 2 ನೆ ಹಂತದಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಆಸ್ಪತ್ರೆ, ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಪ್ರದೇಶಗಳಲ್ಲಿ ವೈ-ಫೈ ರೆನ್ ನಿರ್ಮಿಸಲಾಗುತ್ತಿದೆ. ಗೂಗಲ್ ಸಂಸ್ಥೆ ವತಿಯಿಂದ ನಗರದ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ರೈಲ್‌ಟೆಲ್ ಜತೆ ಮೂರು ವರ್ಷದ ಹಿಂದೆ ಒಪ್ಪಂದ ಮಾಡಿಕೊಂಡಿತ್ತು. ಈಗ ಮುಂದಿನ 10 ವರ್ಷಕ್ಕೆ ಹೆಚ್ಚಾಗುವ ಇಂಟರ್‌ನೆಟ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವೈ-ಫೈ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಬೆಂಗಳೂರು ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಉಚಿತ ವೈ-ಫೈ ಸೇವೆ ಕಲ್ಪಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಈಗ ಖಾಸಗಿ ಕಂಪನಿಗಳು ಮುಂದಾಗಿರುವ ಹಿನ್ನೆಲೆಯಲ್ಲಿ ಇದಕ್ಕೆ ಮತ್ತಷ್ಟು ವೇಗ ಬಂದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News