ಐಎಂಎ ವಂಚನೆ ಪ್ರಕರಣ: ನಾಳೆ ರೋಶನ್ ಬೇಗ್ ವಿಚಾರಣೆ ?

Update: 2019-08-04 14:47 GMT

ಬೆಂಗಳೂರು, ಆ.4: ಐಎಂಎ ವಂಚನೆ ಪ್ರಕರಣ ಸಂಬಂಧ ಅನರ್ಹ ಶಾಸಕ ಆರ್.ರೋಶನ್ ಬೇಗ್ ಅವರನ್ನು ಸಿಟ್ ತನಿಖಾಧಿಕಾರಿಗಳು ನಾಳೆ(ಆ.5) ವಿಚಾರಣೆ ಗೊಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ರೋಶನ್ ಬೇಗ್ ಅವರಿಗೆ ಸಿಟ್ ತನಿಖಾಧಿಕಾರಿಗಳು ಸೂಚಿಸಿ, ಸಮನ್ಸ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಹಲವು ಬಾರಿ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರೂ, ರೋಶನ್ ಬೇಗ್ ಹಾಜರಾಗಲಿಲ್ಲ. ಅಷ್ಟೇ ಅಲ್ಲದೆ, ಅನಾರೋಗ್ಯ ಕಾರಣ ಹೇಳಿ ಕಾಲಾವಕಾಶ ನೀಡುವಂತೆ ಅವರು ಸಿಟ್ ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಇದೇ ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಝಮೀರ್ ಅಹ್ಮದ್ ಅವರನ್ನು ವಿಚಾರಣೆಗೊಳಪಡಿಸಿ, ಅವರ ಹೇಳಿಕೆಗಳನ್ನು ಸಿಟ್ ದಾಖಲು ಮಾಡಿಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್, ರೋಶನ್ ಬೇಗ್ ಅವರ ಮೇಲೆ ಗಂಭೀರ ಆರೋಪ ಮಾಡಿರುವ ಹಿನ್ನಲೆ, ಅವರ ವಿಚಾರಣೆಯೂ ಮಹತ್ವ ಪಡೆದಿದೆ ಎಂದು ಸಿಟ್ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News