ವೇಗದ 25ನೇ ಶತಕ ದಾಖಲಿಸಿದ ಸ್ಮಿತ್

Update: 2019-08-05 01:51 GMT

ಎಡ್ಜ್‌ಬ್ಯಾಸ್ಟನ್, ಆ.4: ಆಸ್ಟ್ರೇಲಿಯದ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ 25ನೇ ಶತಕ ದಾಖಲಿಸಿದ ವಿಶ್ವದ ಎರಡನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

   ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಕ್ರಿಕೆಟ್ ಟೆಸ್ಟ್‌ನ ಎರಡನೇ ಇನಿಂಗ್ಸ್ ನಲ್ಲಿ ಸ್ಮಿತ್ ಶತಕ ದಾಖಲಿಸುವ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಕೊಹ್ಲಿ 127ನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದರು. ಇದೀಗ ಸ್ಮಿತ್ 119ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯದ ಗ್ರೇಟ್ ಡಾನ್ ಬ್ರಾಡ್ಮನ್ 68ನೇ ಇನಿಂಗ್ಸ್‌ನಲ್ಲಿ 25ನೇ ಶತಕ ಪೂರೈಸಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ 130ನೇ ಇನಿಂಗ್ಸ್‌ನಲ್ಲಿ, ಸುನೀಲ್ ಗವಾಸ್ಕರ್ 138, ಮ್ಯಾಥ್ಯೂ ಹೆಡನ್ 139 ಮತ್ತು ಗ್ಯಾರಿ ಸೋಬರ್ಸ್ 147ನೇ ಇನಿಂಗ್ಸ್‌ಗಳಲ್ಲಿ 25ನೇ ಶತಕ ಪೂರೈಸಿದ್ದರು.

2 ಇನಿಂಗ್ಸ್ ಗಳಲ್ಲಿ ಶತಕ : ಸ್ಮಿತ್ ಮೊದಲ ಟೆಸ್ಟ್ ನ ಎರಡೂ ಇನಿಂಗ್ಸ್‌ಗಳಲ್ಲೂ ಶತಕ ದಾಖಲಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 144 ಮತ್ತು ಇದೀಗ ಎರಡನೇ ಇನಿಂಗ್ಸ್‌ನಲ್ಲಿ 142 ರನ್ ಗಳಿಸಿ ಔಟಾಗಿದ್ದಾರೆ.

 ಸ್ಮಿತ್ ಮತ್ತು ಮ್ಯಾಥ್ಯೂ ವೇಡ್ (ಔಟಾಗದೆ 109)ಶತಕದ ನೆರವಿನಲ್ಲಿ ಆಸ್ಟ್ರೇಲಿಯ ಎರಡನೇ ಇನಿಂಗ್ಸ್ ನಲ್ಲಿ 96 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 109 ರನ್ ಗಳಿಸಿದ್ದು, 310 ರನ್‌ಗಳ ಮುನ್ನಡೆ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News