ಎಚ್. ಗೋಪಾಲಕೃಷ್ಣಯ್ಯ

Update: 2019-08-06 16:04 GMT

ಉಡುಪಿ, ಆ.6: ಬಡಗುತಿಟ್ಟಿನ ಪ್ರಸಿದ್ಧ ಹಿಮ್ಮೇಳ ವಾದಕ ಎಚ್.ಗೋಪಾಲ ಕೃಷ್ಣಯ್ಯ ಸೋಮವಾರ ನಿಧನರಾದರು. ಅವರಿಗೆ 76 ವರ್ಷ ಪ್ರಾಯವಾಗಿತ್ತು. ಗೋಪಾಲಕೃಷ್ಣಯ್ಯ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ಶೃಂಗೇರಿ ಸಮೀಪ ಕಿಗ್ಗದ ಹೊನ್ನೆಕುಡಿಗೆಯರಾದ ಇವರು, ಕಿಗ್ಗ, ರಂಜದಕಟ್ಟೆ, ಬಾಳೆಹೊಳೆ, ನೇಗರವಳ್ಳಿ, ಹೆಗ್ಗೋಡು, ಕಮಲಶಿಲೆ, ಗೋಳಿಗರಡಿ, ಪೆರ್ಡೂರು, ಮಾರಣಕಟ್ಟೆ, ಅಮೃತೇಶ್ವರಿ, ಮಡಾಮಕ್ಕಿ, ಹಾಲಾಡಿ, ಮಂದಾರ್ತಿ, ಸೀತೂರು ಮೇಳಗಳಲ್ಲಿ 5 ಶಕಗಳ ಕಲಾ ಸೇವೆ ಮಾಡಿದ್ದಾರೆ.

ಹರಿಹರವುರದಲ್ಲಿ ಯಕ್ಷಗಾನ ಗುರುಗಳಾಗಿ ಅನೇಕ ಮಂದಿ ಯಕ್ಷಗಾನ ಆಸಕ್ತರಿಗೆ ತರಬೇತಿಯನ್ನು ನೀಡಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗೋಪಾಲಕೃಷ್ಣಯ್ಯ ಇವರ ನಿಧನಕ್ಕೆ ಯಕ್ಷಗಾನ ಕಲಾರಂಗ ಅಧ್ಯಕ್ಷ ಕೆ.ಗಣೇಶರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ