ಮೂರನೇ ಟ್ವೆಂಟಿ-20: ಭಾರತಕ್ಕೆ ಭರ್ಜರಿ ಜಯ

Update: 2019-08-07 05:24 GMT

ಪ್ರೊವಿಡೆನ್ಸ್, ಆ.7: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್(ಔಟಾಗದೆ 65, 42 ಎಸೆತ) ಹಾಗೂ ನಾಯಕ ವಿರಾಟ್‌ಕೊಹ್ಲಿ(59,45 ಎಸೆತ)ಅವರ ಅರ್ಧಶತಕಗಳ ಕೊಡುಗೆ ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಮಂಗಳವಾರ ಇಲ್ಲಿ ಒದ್ದೆ ಮೈದಾನದಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿತು.

ಗೆಲ್ಲಲು ಸುಲಭ ಸವಾಲನ್ನೇ ಪಡೆದಿದ್ದ ಭಾರತ 27 ರನ್ ಗಳಿಸುವಷ್ಟರಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡಿತು.ಆಗ ಜೊತೆಯಾದ ನಾಯಕ ಕೊಹ್ಲಿ(59, 45 ಎಸೆತ, 6 ಬೌಂಡರಿ) ಹಾಗೂ ರಿಷಭ್ ಪಂತ್(ಔಟಾಗದೆ 65, 42 ಎಸೆತ, 4 ಬೌಂಡರಿ,4 ಸಿಕ್ಸರ್)3ನೇ ವಿಕೆಟ್‌ಗೆ 106 ರನ್ ಸೇರಿಸಿ 19.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 150 ರನ್ ಕಲೆ ಹಾಕಲು ನೆರವಾದರು.

ವಿಂಡೀಸ್ ಪರ ಥಾಮಸ್(2-29)ಎರಡು ವಿಕೆಟ್ ಪಡೆದರು.

ಚೊಚ್ಚಲ ಪಂದ್ಯದಲ್ಲೇ 3 ಓವರ್‌ಗಳಲ್ಲಿ ಕೇವಲ 4 ರನ್ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿ ಗಮನಾರ್ಹ ಪ್ರದರ್ಶನ ನೀಡಿದ ದೀಪಕ್ ಚಹಾರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News