ರಿಸರ್ವ್ ಬ್ಯಾಂಕ್ ನಿಂದ ರೆಪೋ ದರ 35 ಬೇಸಿಸ್ ಅಂಕಗಳಷ್ಟು ಕಡಿತ

Update: 2019-08-07 08:52 GMT

ಹೊಸದಿಲ್ಲಿ, ಆ.7: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಂಠ ದಾಸ್ ಅವರ ನೇತೃತ್ವದ ಆರ್ಥಿಕ ನೀತಿ ಸಮಿತಿ ಇಂದು ನಾಲ್ಕನೇ ಬಾರಿ ರೆಪೋ ದರ ಕಡಿತ ಘೋಷಿಸಿದೆ. ರೆಪೋ ದರದಲ್ಲಿ35 ಬೇಸಿಸ್ ಅಂಕಗಳನ್ನುಅಥವಾ 0.35% ಅಂಕಗಳನ್ನು ಕಡಿತಗೊಳಿಸಿ 5.50%ಗೆ ಇಳಿಸಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿಯೇ ಇದು ಅತ್ಯಂತ ಕಡಿಮೆ ರೆಪೋ ದರವಾಗಿದ್ದು, ಆರ್ಥಿಕ ಪ್ರಗತಿಗೆ ವೇಗ ನೀಡುವ ಉದ್ದೇಶ ಹೊಂದಿದೆ.

ಈ ರೆಪೋ ದರ ಕಡಿತದಿಂದಾಗಿ ಗೃಹ ಸಾಲ ಮತ್ತಿತರ ಸಾಲಗಳ ಇಎಂಐಗಳು ಕಡಿಮೆಯಾಗುವ ಸಾಧ್ಯತೆಯಿದೆ.

ರೆಪೋ ದರ ಕಡಿತ ನಿರ್ಧಾರ ಸರ್ವಾನುಮತದ್ದಾಗಿತ್ತು. ಆರ್ಥಿಕ ನೀತಿ ಸಮಿತಿಯ ನಾಲ್ವರು ಸದಸ್ಯರು 35 ಬೇಸಿಸ್ ಅಂಕಗಳಷ್ಟು ರೆಪೋ ದರ ಕಡಿತಗೊಳಿಸಬೇಕು ಎಂದು ಸಲಹೆ ನೀಡಿದ್ದರೆ ಉಳಿದವರು ಶೇ.25 ಬೇಸಿಸ್ ಅಂಕಗಳಷ್ಟು ಕಡಿತಗೊಳಿಸಬೇಕೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News