ತಾಯಿ-ಮಗು ಸಾವು ಪ್ರಕರಣ: ಪತಿ ವಶಕ್ಕೆ
Update: 2019-08-07 23:31 IST
ಬೆಂಗಳೂರು, ಆ.7: ಏಳು ವರ್ಷದ ಮಗುವನ್ನು ಕೊಲೆಗೈದು ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಪತಿಯನ್ನು ವಶಕ್ಕೆ ಪಡೆದಿದ್ದಾರೆ.
ಮೂರು ದಿನಗಳ ಹಿಂದೆ ಜ್ಯೋತಿ ಎಂಬಾಕೆ ತನ್ನ 7 ವರ್ಷದ ಮಗಳನ್ನು ಕೊಲೆ ಮಾಡಿ ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ವಿಡಿಯೊಂದಲ್ಲಿ ಪತಿ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪಿಸಿದ್ದಳು.
ಈ ವಿಡಿಯೊ ನೋಡಿದ ಜ್ಯೋತಿ ಸಹೋದರ ಪ್ರಶಾಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ್ವಯ ಪೊಲೀಸರು ಜ್ಯೋತಿಯ ಪತಿ ಪಂಕಜ್ ವಿರುದ್ಧ ದೂರು ದಾಖಲಿಸಿ ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.