ಸರಿತಾ, ನೀರಜ್, ಜಮುನಾ ತೇರ್ಗಡೆ

Update: 2019-08-08 17:51 GMT

ಹೊಸದಿಲ್ಲಿ, ಆ.8: ರಶ್ಯದಲ್ಲಿ ಅ.3ರಿಂದ 13ರ ತನಕ ನಡೆಯಲಿರುವ ಎಐಬಿಎ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗೆ ಇಂಡಿಯಾ ಓಪನ್‌ನಲ್ಲಿ ಚಿನ್ನ ಜಯಿಸಿದ ಸರಿತಾ ದೇವಿ(60 ಕೆ.ಜಿ), ನೀರಜ್(57 ಕೆ.ಜಿ) ಮತ್ತು ಜಮುನಾ ಬೊರೊ(54 ಕೆ.ಜಿ) ಸೇರಿದಂತೆ ಭಾರತದ10 ಮಂದಿ ಮಹಿಳಾ ಬಾಕ್ಸರ್‌ಗಳು ತೇರ್ಗಡೆಯಾಗಿದ್ದಾರೆ.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಟ್ರಯಲ್ಸ್ ಗುರುವಾರ ಮುಕ್ತಾಯಗೊಂಡಿದೆ.

ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್(51 ಕೆ.ಜಿ) ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಲವ್ಲೀನಾ ಬೊರ್ಗೈನ್ (69 ಕೆ.ಜಿ.) ಬುಧವಾರ ವಿಶ್ವ ಚಾಂಪಿಯನ್‌ಶಿಪ್ ತಂಡದಲ್ಲಿ ಅವಕಾಶ ದೃಢಪಡಿಸಿದ್ದರು.

ಮಣಿಪುರದ ಸರಿತಾ ದೇವಿ 2006ರಲ್ಲಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಇದೀಗ ಮತ್ತೊಮ್ಮೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಬೇಟೆಗೆ ತಯಾರಿ ನಡೆಸುತ್ತಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ಗೆ ತಂಡ

ಮಂಜು ರಾಣಿ(48 ಕೆ.ಜಿ), ಮೇರಿ ಕೋಮ್(51 ಕೆ.ಜಿ), ಜಮುನಾ ಬೊರೊ(54 ಕೆ.ಜಿ), ನೀರಜ್(57 ಕೆ.ಜಿ), ಸರಿತಾ ದೇವಿ (60 ಕೆ.ಜಿ), ಮಂಜು ಬೊಂಬೊರಿಯಾ(64 ಕೆ.ಜಿ), ಬೊರ್ಗೈನ್(69 ಕೆ.ಜಿ), ಸಾವೀಟಿ ಬೋರಾ(75 ಕೆ.ಜಿ), ನಂದಿನಿ (ಕೆ.ಜಿ), ಕವಿತಾ ಚಾಹಲ್(+81 ಕೆ.ಜಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News