ದಶಕದಲ್ಲಿ 20,000 ರನ್ ಪೂರೈಸಿದ ಮೊದಲ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ

Update: 2019-08-15 07:42 GMT

ಪೋರ್ಟ್ ಆಫ್ ಸ್ಪೇನ್ , ಆ.15: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಅಂತರ್ ರಾಷ್ಟ್ರೀಯ  ಪಂದ್ಯದಲ್ಲಿ ತನ್ನ 43ನೇ ಶತಕ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಇನ್ನೊಂದು ದಾಖಲೆ ಬರೆದಿದ್ದಾರೆ. ಕಳೆದ 10 ವರ್ಷಗಳಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ 20 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

ಕೊಹ್ಲಿ  ದಾಖಲಿಸಿದ ಸತತ ಎರಡನೇ ಶತಕದ ನೆರವಿನಲ್ಲಿ ಭಾರತ ವಿಂಡೀಸ್ ವಿರುದ್ಧ 6 ವಿಕೆಟ್ ಗಳ ಜಯ ಗಳಿಸಿತ್ತು. ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಜಯಿಸಿತ್ತು. 1 ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿತ್ತು.

30ರ ಹರೆಯದ ಕೊಹ್ಲಿ ಔಟಾಗದೆ 114 ರನ್  ದಾಖಲಿಸಿದ್ದರು. ಮಳೆಯಿಂದಾಗಿ ಡಕ್ ವರ್ಥ್ ಲೂಯಿಸ್  ನಿಯಮದಂತೆ 255 ರನ್ ಗಳ ಸವಾಲು ಪಡೆದಿತ್ತು ಭಾರತ 32.3 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 256 ರನ್ ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿತ್ತು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಕೊಹ್ಲಿ ಬಳಿಕ ಸ್ಥಾನವನ್ನು ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್  (18,962 ) ಗಳಿಸಿದ್ದಾರೆ. ದ.ಆಫ್ರಿಕದ ಮಾಜಿ ಆಲ್ ರೌಂಡರ್ ಜಾಕ್ ಕಾಲಿಸ್ 16, 777 ರನ್, ಮಹೇಲಾ ಜಯವರ್ಧನೆ  16,304, ಕುಮಾರ ಸಂಗಕ್ಕರ 15,999 ರನ್, ಸಚಿನ್ ತೆಂಡುಲ್ಕರ್ 15, 962 , ರಾಹುಲ್ ದ್ರಾವಿಡ್ 15, 853 ರನ್ ಮತ್ತು ಹಾಶಿಮ್ ಅಮ್ಲ 15,185 ರನ್ ಗಳಿಸಿದ್ದಾರೆ.

ಕೊಹ್ಲಿ ಬುಧವಾರ ತಂಡವೊಂದರ ವಿರುದ್ಧ  ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ(9) ದಾಖಲಿಸಿದ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದರು. ಸಚಿನ್   ಆಸ್ಟ್ರೇಲಿಯ ವಿರುದ್ಧ 9 ಶತಕ ದಾಖಲಿಸಿದ್ದರು. ಕೊಹ್ಲಿ  ಇದೀಗ ವಿಂಡೀಸ್ ವಿರುದ್ಧ 9ನೇ ಶತಕ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News