ಲೈವ್ ಬ್ಯಾಂಡ್ ಮೇಲೆ ಸಿಸಿಬಿ ದಾಳಿ: 64 ಆರೋಪಿಗಳ ಬಂಧನ, 66 ಯುವತಿಯರ ರಕ್ಷಣೆ

Update: 2019-08-16 16:38 GMT

ಬೆಂಗಳೂರು, ಆ.16: ಕಾನೂನು ಬಾಹಿರವಾಗಿ ಅಶ್ಲೀಲ ನೃತ್ಯ ನಡೆಸುತ್ತಿದ್ದ ಬ್ಲೂ ಹೆವೆನ್ ಲೈವ್ ಬ್ಯಾಂಡ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 66 ಹುಡುಗಿಯರ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ 18 ಜನ ಸೇರಿದಂತೆ ಒಟ್ಟು 64 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ 65ಸಾವಿರ ರೂ. ನಗದು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ನಗರದ ಕೆ.ಜಿ.ಸರ್ಕಲ್‌ನ ಎಸ್ಸಿ ರಸ್ತೆಯಲ್ಲಿರುವ ಬ್ಲೂ ಹೆವೆನ್ ಬಾರ್ ರೆಸ್ಟೋರೆಂಟ್‌ನಲ್ಲಿ ಹೊರ ರಾಜ್ಯದಿಂದ ಕೆಲಸ ಹುಡುಕಿಕೊಂಡು ಬಂದ ಹುಡುಗಿಯರನ್ನು ಬಾರ್ ಗರ್ಲ್‌ಗಳಾಗಿ ಕೆಲಸಕ್ಕಿಟ್ಟುಕೊಂಡು, ಅವರಿಗೆ ಅಶ್ಲೀಲ ಉಡುಗೆಗಳನ್ನು ತೊಡಿಸಿ, ಅಶ್ಲೀಲ ನೃತ್ಯವನ್ನು ಮಾಡಿಸುತ್ತಾ ಗಿರಾಕಿಗಳಿಗೆ ಲೈಂಗಿಕ ಪ್ರಚೋದನೆ ಮಾಡಿಸುತ್ತಾ ಯುವತಿಯರ ಮೇಲೆ ಹಣವನ್ನು ಎಸೆಯುವಂತೆ ಪ್ರಚೋದಿಸುತ್ತಾ ಅಕ್ರಮ ಸಂಪಾದನೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಿಸಿಬಿ ತಿಳಿಸಿದೆ.

ಬಂಧಿತರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News