ಗೆಲುವಿನ ಹಾದಿಯಲ್ಲಿ ಶ್ರೀಲಂಕಾ

Update: 2019-08-17 18:34 GMT

ಗಾಲೆ, ಆ.17: ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಆತಿಥೇಯ ಶ್ರೀಲಂಕಾ ದ್ವಿತೀಯ ಇನಿಂಗ್ಸ್‌ನಲ್ಲಿ ಗೆಲುವಿಗೆ 268 ರನ್ ಗಳಿಸಬೇಕಿದ್ದು, ಸುಭದ್ರ ಸ್ಥಿತಿಯಲ್ಲಿದೆ.

ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನವಾಗಿರುವ ಶನಿವಾರ ಆಟ ನಿಂತಾಗ ಶ್ರೀಲಂಕಾ 50 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 133 ರನ್ ಗಳಿಸಿದ್ದು, ಸುಭದ್ರ ಸ್ಥಿತಿಯಲ್ಲಿದೆ.

 ಆರಂಭಿಕ ದಾಂಡಿಗರಾದ ಕರುಣರತ್ನೆ (ಔಟಾಗದೆ 71) ಮತ್ತು ಲಹಿರು ತಿರಿಮನ್ನೆ (ಔಟಾಗದೆ 57) ಕ್ರೀಸ್‌ನಲ್ಲಿದ್ದಾರೆ.

ಕರುಣರತ್ನೆ ಮತ್ತು ಲಹಿರು ಮೊದಲ ವಿಕೆಟ್ ಮುರಿಯದ ಜೊತೆಯಾಟದಲ್ಲಿ 133 ರನ್‌ಗಳ ಜೊತೆಯಾಟ ನೀಡಿದ್ದಾರೆ. ಕಿವೀಸ್ ವಿರುದ್ಧ ಗೆಲುವಿಗೆ ಇನ್ನೂ 135 ರನ್ ಗಳಿಸಬೇಕಾಗಿದೆ.

ದಿನದ ಆಟ ಮಂದಬೆಳಕಿನಿಂದಾಗಿ ಅರ್ಧಗಂಟೆಯ ಮೊದಲು ಸ್ಥಗಿತಗೊಂಡಿತು.=  

ನಾಯಕ ಕರುಣರತ್ನೆ 23ನೇ ಅರ್ಧಶತಕ ಮತ್ತು ತಿರಿಮನ್ನೆ 6ನೇ ಅರ್ಧಶತಕ ದಾಖಲಿಸಿದರು. ಇವರು ದಾಖಲೆಯ ಜೊತೆಯಾಟ ನೀಡಿದರು. ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ವಿಕೆಟ್‌ಗೆ ಇವರು ಉತ್ತಮ ರನ್ ಕಲೆ ಹಾಕಿದ್ದಾರೆ. 1992ರಲ್ಲಿ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ರೋಶನ್ ಮಹಾನಾಮಾ ಮತ್ತು ಚಂಡಿಕಾ ಹಥುರು ಸಿಂೆ ನ್ಯೂಝಿಲ್ಯಾಂಡ್ ವಿರುದ್ಧ 102 ರನ್‌ಗಳ ಜೊತೆಯಾಟ ನೀಡಿದ್ದರು. ಮೂರನೇ ದಿನದಾಟದಂತ್ಯಕ್ಕೆ ನ್ಯೂಝಿಲ್ಯಾಂಡ್ 7 ವಿಕೆಟ್ ನಷ್ಟದಲ್ಲಿ 195 ರನ್ ಗಳಿಸಿತ್ತು. ವಾಟ್ಲಿಂಗ್ 63 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ನ್ಯೂಝಿಲ್ಯಾಂಡ್ ಆಟ ಮುಂದುವರಿಸಿ ಈ ಮೊತ್ತಕ್ಕೆ 90 ರನ್ ಸೇರಿಸಿತು. ವಾಟ್ಲಿಂಗ್ 77 ರನ್ ಗಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News