ಅಭ್ಯಾಸ ಪಂದ್ಯದಲ್ಲಿ ಪೂಜಾರ ಶತಕ, ರೋಹಿತ್ ಅರ್ಧಶತಕ

Update: 2019-08-18 09:26 GMT


ಅ್ಯಂಟಿಗವಾ , ಆ.18: ವೆಸ್ಟ್‌ಇಂಡೀಸ್ ‘ಎ’ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ  ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಶತಕ ಮತ್ತು ರೋಹಿತ್ ಶರ್ಮಾ ಅರ್ಧ ಶತಕ ದಾಖಲಿಸಿದ್ದಾರೆ.

  ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನವಾಗಿರುವ ಶನಿವಾರ ಆಟ ಕೊನೆಗೊಂಡಾಗ 88.2 ಓವರ್‌ಗಳಲ್ಲಿ ಭಾರತ 5 ವಿಕೆಟ್ ನಷ್ಟದಲ್ಲಿ 297 ರನ್ ಗಳಿಸಿತ್ತು.
   ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕರಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಉಪನಾಯಕ ಅಜಿಂಕ್ಯ ರಹಾನೆ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.

 ಮಾಯಾಂಕ್ ಅಗರ್‌ವಾಲ್ ಮತ್ತು ಲೋಕೇಶ್ ರಾಹುಲ್ ತಂಡದ ಇನಿಂಗ್ಸ್ ಆರಂಭಿಸಿದ್ದರು. ಆದರೆ ಅವರು ಮೊದಲ ವಿಕೆಟ್‌ಗೆ ಉತ್ತಮ ರನ್ ಕಲೆ ಹಾಕುವಲಲಿ ವಿಫಲರಾದರು. 10.1ನೇ ಓವರ್‌ನಲ್ಲಿ ಜೋನಾಥನ್ ಕಾರ್ಟೆರ್ ಎಸೆತವನ್ನು ಕೆಣಕಲು ಹೋಗಿ ಮಾಯಾಂಕ್ ಅಗರ್‌ವಾಲ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಅಗರ್‌ವಾಲ್ 12 ರನ್ ಗಳಿಸಿದರು. ರಾಹುಲ್ 46 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಇರುವ 36 ರನ್ ಗಳಿಸಿದರು. ನಾಯಕ ರಹಾನೆ 1 ರನ್ ಗಳಿಸಿ ಕಾರ್ಟೆರ್‌ಗೆ ವಿಕೆಟ್ ಒಪ್ಪಿಸಿದರು.
  ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ 4ನೇ ವಿಕೆಟ್‌ಗೆ 132 ರನ್‌ಗಳ ಜೊತೆಯಾಟ ನೀಡಿದರು. ಪೂಜಾರ 187 ಎಸೆತಗಳಲ್ಲಿ ಶತಕ ದಾಖಲಿಸಿ ಗಾಯಾಳುವಾಗಿ ಕಣದಿಂದ ಹೊರ ನಡೆದರು. ರೋಹಿತ್ ಶರ್ಮ 115 ಎಸೆತಗಳಲ್ಲಿ 68 ರನ್ ಮತ್ತು ರಿಷಭ್ ಪಂತ್ 33 ರನ್ ಗಳಿಸಿ ಔಟಾದರು. ಆಟ ನಿಂತಾಗ ಹನುಮ ವಿಹಾರಿ ಔಟಾಗದೆ 37 ರನ್ ಮತ್ತು ರವೀಂದ್ರ ಜಡೇಜ ಔಟಾಗದೆ 1 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News