ಅಬ್ದುಲ್ ಲತೀಫ್

Update: 2019-08-18 14:10 GMT

ಮೂಡುಬಿದಿರೆ: ಕಾಂಗ್ರೆಸ್ ಕಾರ್ಯಕರ್ತ, ಪುರಸಭೆ ಮಾಜಿ ಸದಸ್ಯ, ಪ್ರಾಂತ್ಯ ಗ್ರಾಮದ ಲಾಡಿ ನಿವಾಸಿ, ಅಬ್ದುಲ್ ಲತೀಫ್(68)ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.  

ಮೂರು ಬಾರಿ ಮೂಡುಬಿದಿರೆ ಪುರಸಭೆಗೆ ಆಯ್ಕೆಯಾಗಿದ್ದ ಅವರು ಒಂದು ಅವಧಿಗೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು. ಅವರು ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿದ್ದರು. ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ