ಹಿಂದಿ ಬ್ಯಾನರ್ ವಿರುದ್ಧ ಪ್ರತಿಭಟಿಸಿದವರನ್ನು ‘ರೌಡಿಗಳು’ ಎಂದ ತೇಜಸ್ವಿ ಸೂರ್ಯ: ಛೀಮಾರಿ ಹಾಕಿದ ಕನ್ನಡಿಗರು

Update: 2019-08-18 16:35 GMT

ಬೆಂಗಳೂರು, ಆ.18: ಹಿಂದಿ ಬ್ಯಾನರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದವರನ್ನು ‘ರೌಡಿಗಳು’ ಎಂದ ಸಂಸದ ತೇಜಸ್ವಿ ಸೂರ್ಯರ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

“ಹಿಂದಿ ಬ್ಯಾನರ್ ಗಾಗಿ ನಮ್ಮ ಜೈನ ಸಹೋದರರ ಮೇಲೆ ಕೆಲ ರೌಡಿಗಳು ದಾಳಿ ನಡೆಸಿರುವ ಘಟನೆಯಿಂದ ತೀವ್ರ ನೋವಾಗಿದೆ. ಬೆಂಗಳೂರಿನಲ್ಲಿ ‘ಅರಬಿ’ ಬಳಕೆಯನ್ನು ಅವರೆಂದಿಗೂ ಪ್ರಶ್ನಿಸುವುದಿಲ್ಲ” ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಈ ಬಗ್ಗೆ ಟ್ವಿಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಿಗರು ಸಂಸದರಿಗೆ ಛೀಮಾರಿ ಹಾಕಿದ್ದಾರೆ.

“ನಿಮ್ಮ ಸ್ವಕ್ಷೇತ್ರದಲ್ಲೇ ನೀವು ಅರೆಬಿಕ್ ವಿರುದ್ಧ ಹಿಂಸೆಯನ್ನೇಕೆ ಪ್ರಚೋದಿಸುತ್ತಿದ್ದೀರಿ. ಆ ಕಿಡಿಗೇಡಿಗಳನ್ನು ಬಂಧಿಸುವಂತಾಗಲು ನಿಮ್ಮಲ್ಲಿ ಅಧಿಕಾರವಿದೆಯಾದರೂ ನೀವು ಕರ್ನಾಟಕದಲ್ಲಿ ಹಿಂದೀಕರಣವನ್ನು ಬೆಂಬಲಿಸುತ್ತಿದ್ದೀರಿ ಎನ್ನುವುದು ಸ್ಪಷ್ಟವಾಗಿದೆ” ಎಂದು ಅನುಪಾ ಎಂಬವರು ಟ್ವೀಟ್ ಮಾಡಿದ್ದಾರೆ.

“ಕೆಲ ರೌಡಿಗಳು ಸಂಘಿಗಳು. ಅವರು ಬಿಜೆಪಿಗೆ ಸೇರಿದವರು. ಕ್ರಮ ಕೈಗೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿ” ಎಂದು ಅರುಣ್ ಮೈಸೂರು ಎಂಬವರು ಟ್ವೀಟ್ ಮಾಡಿದ್ದಾರೆ.

“ಕನ್ನಡ ಫಲಕಗಳ ಪ್ರದರ್ಶನದ ಬಗ್ಗೆ ಕರ್ನಾಟಕ ಸರಕಾರ ಮತ್ತು ಬಿಬಿಎಂಪಿ ರಚಿಸಿರುವ ಸಂಪೂರ್ಣ ಉಲ್ಲಂಘನೆಯನ್ನು ಈ ಬೆಂಗಳೂರಿನ ಸೋ ಕಾಲ್ಡ್ ಸಂಸದರು ಬೆಂಬಲಿಸುತ್ತಿದ್ದಾರೆ. ಫಲಕಗಳಲ್ಲಿ ಕನ್ನಡ ಅಕ್ಷರಗಳಿಲ್ಲದೆ ಇರುವುದು ಕೆಎಂಸಿ ಕಾಯ್ದೆಯ ಉಲ್ಲಂಘನೆ. ಹೋಗಿ ನಿಯಮಗಳನ್ನು ಓದಿ” ಎಂದು ಲೋಕೇಶ್ ಎಂಬವರು ಟ್ವೀಟ್ ಮಾಡಿದ್ದಾರೆ.

“ವಲಸಿಗರಿಂದ ಯಾವುದೋ ರೀತಿಯಲ್ಲಿ ಅನ್ಯಾಯ, ಮೋಸವಾಗುತ್ತಿದೆ. ಇದನ್ನೆಲ್ಲ ಕೇಳದ ನೀವು, ಹಿಂದಿ ಹೇರಿಕೆ ಪ್ರಶ್ನಿಸಿದ ಕನ್ನಡಿಗರನ್ನ ರೌಡಿಗಳು ಅಂ ಕರೆದು ಯಾವಸಂದೇಶ ಕೊಡ್ತಾ ಇದ್ದೀರಾ? ನಿಮ್ಮನ್ನ ಗೆಲ್ಲಿಸಿದ್ದು ಕನ್ನಡಿಗರೇ ಹೊರತು, ಇನ್ಯಾವ ಹಿಂದಿ ಮಾರ್ವಾಡಿಗಳಲ್ಲ. ಕನ್ನಡಿಗರ ಅನ್ನ ಕಿತ್ತುಕೊಳ್ಳುತ್ತಾ ಇರುವವರ ಪರವಿರುವ ನಿನಗೆ ತುಪುಕ್” ಎಂದು ಕೀರ್ತಿ ಕುಮಾರ್ ಎಂಬವರು ಟ್ವೀಟಿಸಿದ್ದಾರೆ.

“ಕರ್ನಾಟಕದ ಜೈನರು ಕನ್ನಡಕ್ಕೆ ಕೊಟ್ಟ ಕೊಡುಗೆಯೊಂದಿಗೆ ಗುಜರಾತಿ ಜೈನರ ಹೋಲಿಕೆ ಮಾಡ್ತಿದ್ದಿಯಲ್ಲಾ ಹೊಟ್ಟೆಗ್ ಏನ್ ತಿಂತಿರಾ ಸ್ವಾಮಿ! ನಿಮ್ ತಲೆಲಿ ಸಗಣಿ ಇರೋದು ಅಂತಾ ಪದೇ ಪದೇ ತೋರಿಸ್ತಿದ್ದೀರಾ. ಒಳ್ಳೆಯದ್ದೇ ಆಯಿತು ಬಿಡಿ” ಎಂದು ಮನು ಸಿಆರ್ ಎಂಬವರು ಟ್ವೀಟ್ ಮಾಡಿದ್ದಾರೆ.

“ಮುಚ್ಚಪಾ ಸಾಕು. ಕನ್ನಡಿಗರಿಂದ ಗೆದ್ದು ಕನ್ನಡಿಗರನ್ನು ರೌಡಿ ಅಂತಿಯಾ ನಿಂಗೆ ದುರಹಂಕಾರ ಜಾಸ್ತಿ ಆಗಿದೆ. ಮೊದಲು ಕನ್ನಡಿಗರಿಗೆ ಆಗುತ್ತಿರುವ ದಬ್ಬಾಳಿಕೆ ನಿಲ್ಲಿಸಿ. ಭಾಷೆವಿಚಾರವಾಗಿ ಆದ ಜಗಳಕ್ಕೆ ಧರ್ಮದ ಹೆಸರು ಕಟ್ಟಬೇಡ. ನೀವೆಲ್ಲ ನಮ್ಮ ಜನಪ್ರತಿನಿಧಿಗಳು” ಎಂದು ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.

“ಗೌರವಾನ್ವಿತ ಸಂಸದರೇ, ಘಟನೆಯೊಂದನ್ನು ಕೋಮುವಾದಕ್ಕೆ ಪ್ರಯತ್ನಿಸುತ್ತಿರುವುದು ಇದೇ ಮೊದಲೇನಲ್ಲ. ಇಂತಹ ಹೇಳಿಕೆಗಳನ್ನು ನೀಡಬೇಡಿ. ಈ ಹಿಂದೆ ದೇವಸ್ಥಾನ ದ್ವಂಸಕ್ಕೆ ನಿರ್ದಿಷ್ಟ ಸಮುದಾಯವನ್ನು ದೂಷಿಸಿದ್ದೀರಿ. ಆದರೆ ಅದು ಸುಳ್ಳೆಂದು ಸಾಬೀತಾಯಿತು” ಎಂದು ಪ್ರವೀಣ್ ಕುಮಾರ್ ಟ್ವೀಟ್ ಮಾಡಿದ್ದಾರೆ.

“ಉರ್ದು ತೇಗಿ ಅನ್ನೋ ನಿನ್ನ ಇದೆ  ವಾದ ಯಾಕೆ ಹೋಗಿ ನಿಮ್ಮ ಸೊ ಕಾಲ್ಡ್ ಯೋಗಿಗೆ ಹೇಳಿ ಉತ್ತರ ಪ್ರದೇಶದಲ್ಲಿ ಮೊದಲು ಉರ್ದುಗೆ ಅಧಿಕೃತ ಭಾಷೆಯ ಸ್ಥಾನ ರದ್ದುಪಡಿಸಿ ಆಮೇಲೆ ಇಲ್ಲಿ ಬಂದು ಹೇಳಬಾರದು ಯಾಕೆ ದಂ ಇಲ್ವಾ..ನಿಮ್ಮ ಪಕ್ಷದ ಸ್ಟ್ರಾಂಗ್ ಬೇಸ್ ನಲ್ಲೆ ಮಾಡಕ್ ಆಗ್ದೇ ಇರೋರು ಇಲ್ಲಿ ಬಂದು ಸುಳ್ಳು ಹೇಳೋದು ಬಿಡಿ ಮೊದ್ಲು” ಎಂದು ಭುವನೇಶ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News