ಅತಿಯಾದ ದುರಾಸೆಯೇ ಪ್ರಕೃತಿ ವಿಕೋಪಕ್ಕೆ ಕಾರಣ: ಸಾಹಿತಿ ಡಾ.ಚಿಂತಾಮಣಿ

Update: 2019-08-18 17:21 GMT

ಬೆಂಗಳೂರು, ಆ.18: ಮನುಷ್ಯರ ಅತಿಯಾದ ದುರಾಸೆಗಳೇ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದೆ ಎಂದು ಸಾಹಿತಿ ಡಾ.ಚಿಂತಾಮಣಿ ಕೊಡ್ಲೆಕೆರೆ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಬಿಎಂಶ್ರೀ ಪ್ರತಿಷ್ಠಾನ ಎಂ.ವಿ.ಸೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ಸಿರಿ’ ಸಂಚಿಕೆಯ ಬಿಡುಗಡೆ ಮತ್ತು ಸಾಹಿತ್ಯ ದಾಸೋಹ ಅಭಿಯಾನದ 20ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿಗೆ ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ 50ಕ್ಕೂ ಅಧಿಕ ಜನರು ಪ್ರಾಣ ತೆತ್ತರು. ಅಲ್ಲದೆ, ಸಾವಿರಾರು ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ನೂರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿವೆ. ಇಂತಹ ದುಸ್ಥಿತಿಗೆ ನಾವುಗಳೇ ಕಾರಣವಾಗಿದ್ದು, ಜನರ ದುರಾಸೆಯೇ ಇದಕ್ಕೆ ಮೂಲ ಕಾರಣ ಎಂದು ಹೇಳಿದರು.

ಮನುಷ್ಯರು ಪರಿಸರದೊಂದಿಗೆ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಹರಿಯುವ ನೀರನ್ನು ತನ್ನಷ್ಟಕ್ಕೆ ತಾನು ಹರಿದುಹೋಗುವ ಹಾಗೆ ಅವಕಾಶ ಕಲ್ಪಿಸುತ್ತಾ, ನಮಗೆ ಅಗತ್ಯವಾದಷ್ಟು ಪಡೆಯಬೇಕು. ಆದರೆ, ನಾವಿಂದು ನೀರು ಹರಿಯಲು ಬಿಡದೇ ಕಟ್ಟೆಗಳನ್ನು ನಿರ್ಮಿಸಿದ್ದೇವೆ, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ್ದೇವೆ. ಪರಿಸರವನ್ನು ಮನಸ್ಸು ಬಂದಂತೆ ಹಾಳು ಮಾಡಿದ್ದು, ಅದರ ಫಲ ಇದಾಗಿದೆ ಎಂದು ನುಡಿದರು.

ಸಾಹಿತ್ಯ ಸಿರಿ ಕೃತಿಯೇ ಒಂದು ವಿಶೇಷ ಮತ್ತು ನೂತನ ಪ್ರಯತ್ನ. ಬರೆಯಲು ಲೇಖಕರೇ ಆಗಬೇಕಿಲ್ಲ ಅಥವಾ ಸಾಹಿತ್ಯ ನ್ನೆಲೆಯೇ ಬೇಕಾಗಿಲ್ಲ ಎಂದು ಈ ಕೃತಿ ಮೂಲಕ ಬರಹಗಾರರು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಾಹಿತ್ಯ ದಾಸೋಹ, ಸಮನ್ವಯ ಸಮಿತಿ ಮತ್ತು ಕನ್ನಡವೇ ಸತ್ಯ ವಾಟ್ಸಪ್ ಬಳಗ ತಮ್ಮ ಬರವಣಿಗೆಗೆ ಒಂದು ಪುಸ್ತಕ ರೂಪ ಕೊಟ್ಟು ಓದುಗರಿಗೆ ನೀಡಿರುವುದು ಶ್ಲಾಘನೀಯ ಕಾರಣ ಎಂದರು.

ಸಾಹಿತ್ಯ ದಾಸೋಹ ಅಭಿಯಾನದ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ಎಚ್.ಎಸ್.ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಬ್ಯಾಂಕಿಂಗ್ ಕಮ್ಮಟದ ರೀತಿಯಲ್ಲಿಯೇ 20ವರ್ಷಗಳ ಹಿಂದೆ ಸಾಹಿತ್ಯ ದಾಸೋಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅದು ಇಂದಿಗೂ ನಿರಂತರತೆ ಕಾಯ್ದುಕೊಂಡು ಬಂದಿದೆ. ಇದರಿಂದ ಸಾತ್ಯ ಬಳಗ ಸಸ್ತಾರವಾಗಿ ಬೆಳೆದಿದೆ ಎಂದು ಹೇಳಿದರು.

ಸಾಹಿತ್ಯ ದಾಸೋಹ ಅಭಿಯಾನದ ಸಂಚಾಲಕ ಕೆ.ಎನ್.ಮಹಾಬಲ ಮಾತನಾಡಿ, ಇತ್ತೀಚೆಗೆ ಸಾತ್ಯಾಭಿರುಚಿ ಯುವಪೀಳಿಗೆಯಲ್ಲಿ ಕಣ್ಮರೆಯಾಗಿದೆ. ನಮ್ಮ ವೇದಿಕೆಯ ಮುಖ್ಯ ಉದ್ದೇಶ ಸಾತ್ಯಾಸಕ್ತಿ ಮೂಡಿಸುವುದು. ಯುವಜನತೆ ಸಾತ್ಯ ವಲಯದಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ಹೊಸದಾಗಿ ಬರೆಯಲು ಪ್ರಯತ್ನ ಮಾಡುವವರಿಗೆ ಆತ್ಮ ವಿಶ್ವಾಸ ತುಂಬಬೇಕಿದೆ ಎಂದು ಅಭಿಪ್ರಾಯಿಸಿದರು.

ಸಮಾರಂಭದಲ್ಲಿ ‘ಸಾಹಿತ್ಯ ಸಿರಿ’ ಸಂಚಿಕೆಯ ಬಿಡುಗಡೆ ಮಾಡಲಾಯಿತು. ಈ ವೇಳೆ ಸಾಹಿತಿ ಜಯಂತ್ ಕಾಯ್ಕಿಣಿ, ಅಭಿಯಾನದ ಪ್ರಕಾಶ್, ರವೀಂದ್ರ ಸೇರಿದಂತೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News