ಕಲಾವಿದ ಬಿ.ಆರ್.ಕೊರ್ತಿಗೆ ತಿಪ್ಪೇಸ್ವಾಮಿ ಪ್ರತಿಷ್ಠಾನದ ಪ್ರಶಸ್ತಿ

Update: 2019-08-19 18:18 GMT

ಬೆಂಗಳೂರು, ಆ.19: ಚಿತ್ರಕಲಾವಿದ ಬಿ.ಆರ್.ಕೊರ್ತಿರವರಿಗೆ ಈ ಬಾರಿಯ ಪಿ.ಆರ್.ತಿಪ್ಪೇಸ್ವಾಮಿ ಚಿತ್ರಕಲಾ ಪ್ರಶಸ್ತಿ ಲಭಿಸಿದೆ.

75 ವರ್ಷದ ಕೊರ್ತಿ, ಆರೋಗ್ಯ ಇಲಾಖೆ ಮತ್ತು ದಾವಣಗೆರೆ ಲಲಿತಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಕಲಾವಿದರಾಗಿ ಇಂದು ಸಹ ನಿರಂತರ ಕಲಾ ಅಧ್ಯಯನ ಮಾಡುತ್ತಿದ್ದಾರೆ. ಜಲವರ್ಣದಲ್ಲಿ ನಿಸರ್ಗಚಿತ್ರ, ಭಾವಚಿತ್ರ, ಸ್ಥಿರಚಿತ್ರ, ರೇಖಾಚಿತ್ರಗಳ ರಚನೆಯಲ್ಲಿ ಸಿದ್ಧಹಸ್ತರಾಗಿರುವ ಇವರಿಗೆ ನೂರಾರು ಕಲಾ ವಿದ್ಯಾರ್ಥಿಗಳ ಸಮೂಹವಿದೆ. ಇಂದು ದಾವಣಗೆರೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಜಾನಪದ ಕಲಾವಿದರಾದ ಮಂಜಮ್ಮ ಜೋಗತಿಯವರಿಗೆ ಈ ಬಾರಿಯ ಪಿ.ಆರ್.ತಿಪ್ಪೇಸ್ವಾಮಿ ಜಾನಪದಕಲಾ ಪ್ರಶಸ್ತಿ ಲಭಿಸಿದೆ. ಇವರಿಗೆ 61 ವರ್ಷ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯವರು. ಜೋಗತಿ ದೀಕ್ಷೆ ಪಡೆದು, ಕಲೆಯನ್ನು ಉಸಿರಾಗಿಸಿಕೊಂಡಿರುವ ಇವರು ಜೋಗತಿ ನೃತ್ಯ ಕಲಾತಂಡಗಳನ್ನು ರಚಿಸಿಕೊಂಡು ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಕ್ರಿಯವಾಗಿ ಕಲಾಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ವಿಜಾಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಕಲಾವಿದರ ಆತ್ಮಕಥೆಯ ವಿಭಾಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಲ್ಲಿ ಇವರ ಬಗ್ಗೆ ಪಾಠ ಸೇರ್ಪಡೆಯಾಗಿದೆ. ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಗೌರವ ಪ್ರಶಸ್ತಿಯನ್ನು ಸೆ.5ರಂದು ಮೈಸೂರಿನ ಶ್ರೀಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಲಾ 25 ಸಾವಿರ ರೂ.ನಗದು, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News