ಭಾರತೀಯ ಐಟಿ ಕ್ಷೇತ್ರದ ಸ್ವರೂಪವನ್ನೇ ಬದಲಾಯಿಸಿದ ನಾರಾಯಣ ಮೂರ್ತಿ

Update: 2019-08-19 18:39 GMT

ಭಾರತದ ಐಟಿ ಕ್ಷೇತ್ರದ ಪಿತಾಮಹ ಇನ್ಫೋಸಿಸ್ ನಾರಾಯಣ ಮೂರ್ತಿಯವರು 1946ರ ಆಗಸ್ಟ್ 20ರಂದು ಕೋಲಾರ ಜಿಲ್ಲೆಯಲ್ಲಿ ಜನಿಸಿದರು. ಭಾರತದ ಐಟಿ ಕ್ಷೇತ್ರದ ಪಿತಾಮಹ ಎಂದೇಖ್ಯಾತರಾಗಿರುವ  ಅವರು ಇನ್ಫೋಸಿಸ್ ಸಂಸ್ಥೆಯ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸಿದವರು.   

ಕೋಲಾರದ ಶಿಡ್ಲಘಟ್ಟದಲ್ಲಿ ಜನಿಸಿದ ನಾರಾಯಣ ಮೂರ್ತಿ ತಮ್ಮ ಶಾಲಾ ಶಿಕ್ಷಣದ ಬಳಿಕ ನ್ಯಾಷನಲ್ ಇನ್‍ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿಪದವಿ ಪಡೆದರು. 1969ರಲ್ಲಿ ಕಾನ್ಪುರದ ಐಐಟಿಯಿಂದ ಸ್ನಾತ್ತಕೋತ್ತರ ಪದವಿಯನ್ನೂ ಅವರು ಪಡೆದರು. ನಂತರ ಲಂಡನ್ ಗೆ ತೆರಳಿದ ಅವರು ಅಲ್ಲಿ ಎಸ್‍ಇಎಸ್‍ಎ ಎಂಬ ಕಂಪೆನಿಯಲ್ಲಿಮೂರು ವರ್ಷ ಸೇವೆ ಸಲ್ಲಿಸಿದರು. ಪ್ಯಾರಿಸ್ ನ ಚಾರ್ಲ್ಸ್ ಡೆ ಗೌಲೆ ಟರ್ಮಿನಲ್ ನಲ್ಲಿ ವಿಮಾನ ಸರಕು ನಿರ್ವಹಣೆ ಸಾಫ್ಟವೇರ್ ಡಿಸೈನ್ ಮೂಲಕ ಖ್ಯಾತಿ ಪಡೆದ ಅವರು ನಂತರ ಭಾರತಕ್ಕೆಮರಳಿದರು.

ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾರಾಯಣ ಮೂರ್ತಿ ತಾವು ನಂಬಿಕೊಂಡು ಬಂದ ಮೌಲ್ಯಗಳು ಹಾಗೂ ತತ್ವಗಳೊಂದಿಗೆ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ನಾರಾಯಣಮೂರ್ತಿಯವರನ್ನು ಫಾರ್ಚೂನ್ ಮ್ಯಾಗಝಿನ್ ಜಗತ್ತಿನ 12 ಮಹೋನ್ನತ ಉದ್ಯಮಿಗಳಲ್ಲಿ ಒಬ್ಬರೆಂದು ಗುರುತಿಸಿದೆ.

1976ರಲ್ಲಿ ಅವರು ಐಐಎಂ ಅಹ್ಮದಾಬಾದ್ ನಲ್ಲಿ ಸಿಸ್ಟಮ್ಸ್ ಚೀಫ್ ಆಗಿ ಉದ್ಯೋಗಕ್ಕೆ ಸೇರಿ ಮುಂದೆ ಪುಣೆಯಲ್ಲಿ ಸಣ್ಣ ಐಟಿ ಸಾಫ್ಟ್‍ವೇರ್ ಕನ್ಸಲ್ಟಿಂಗ್ ಸಂಸ್ಥೆ ಸ್ಥಾಪಿಸಿದರು. ಆದರೆ ಅದುವಿಫಲವಾಗಿ ಅವರು ‘ಪತ್ನಿ ಕಂಪ್ಯೂಟರ್ ಸಿಸ್ಟಮ್ಸ್’ ಸೇರಿದರು. ಈ ಸಂದರ್ಭ ಅವರಿಗೆ ಸುಧಾಮೂರ್ತಿ ಪರಿಚಯವಾಗಿ ಮುಂದೆ ಅವರಿಬ್ಬರು ವಿವಾಹವಾದರು.

1991ರಲ್ಲಿ ನಾರಾಯಣಮೂರ್ತಿ ಇನ್ಫೋಸಿಸ್ ಸ್ಥಾಪಿಸಿದರು. ಆರು ಮಂದಿ ಇತರ ಸಾಫ್ಟ್‍ವೇರ್ ಕ್ಷೇತ್ರದ ವೃತ್ತಿಪರರ ಜತೆ ಸೇರಿ ಅವರು ಈ ಸಂಸ್ಥೆಯನ್ನು ಸ್ಥಾಪಿಸಿ 1981ರಿಂದ 2002ರತನಕ ಅದರ ಸಿಇಒ ಆಗಿ ಸಂಸ್ಥೆಯ ಅಭಿವೃದ್ಧಿಗೆ ಅವಿರತ ಶ್ರಮ ಪಟ್ಟರು. ಮುಂದೆ 2002ರಿಂದ 2011ರ ತನಕ ಅವರು ಸಂಸ್ಥೆಯ ಚೇರ್ಮೆನ್ ಆಗಿ ಹಾಗೂ ಮಾರ್ಗದರ್ಶಕರಾಗಿಮುಂದುವರಿದರು.

ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ಎಲ್ಲರಿಗೂ ಮಾದರಿ ಎಂದರೆ ತಪ್ಪಾಗಲಾರದು. ಇವರಿಬ್ಬರ ಸರಳ ಜೀವನವನ್ನು ಕಂಡು ಹುಬ್ಬೇರಿಸದವರೇ ಇಲ್ಲ.

ನಾರಾಯಣ ಮೂರ್ತಿ ಅವರು ಐಟಿ ಕ್ಷೇತ್ರಕ್ಕೆ ಸಲ್ಲಿಸಿದ ಮಹೋನ್ನತ ಸೇವೆಗೆ ಅವರಿಗೆ ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News