ವಿಂಡೀಸ್ ‘ಎ’ ಗೆ ಉಮೇಶ್ , ಇಶಾಂತ್, ಕುಲದೀಪ್ ಪ್ರಹಾರ

Update: 2019-08-19 18:46 GMT

     ಅ್ಯಂಟಿಗುವಾ , ಆ.19: ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ವೇಗಿಗಳಾದ ಉಮೇಶ್ ಯಾದವ್ , ಇಶಾಂತ್ ಶರ್ಮಾ ಮತ್ತು ಕುಲದೀಪ್ ಯಾದವ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 56.1 ಓವರ್‌ಗಳಲ್ಲಿ 181 ರನ್ ಗಳಿಗೆ ಆಲೌಟಾಗಿದೆ.

 ಭಾರತ ಮೊದಲ ದಿನ 88.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 297 ರನ್ ಗಳಿಸಿತ್ತು. ಈ ಮೊತ್ತಕ್ಕೆ ಭಾರತ ಯಾವುದೇ ರನ್ ಸೇರಿಸದೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

 ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್‌ಇಂಡೀಸ್ ‘ಎ’ ತಂಡಕ್ಕೆ ಭಾರತದ ಮೂವರು ಬೌಲರ್‌ಗಳು ಆಘಾತ ನೀಡಿದರು. ಕವೆಮ್ ಹಾಡ್ಜ್ 51 ರನ್ ಮತ್ತು ಜಾಮರ್ ಹ್ಯಾಮಿಲ್ಟನ್ 33 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಉಳಿದ ಆಟಗಾರರು ವಿಫಲರಾದರು.

ಭಾರತದ ಉಮೇಶ್ ಯಾದವ್ 19ಕ್ಕೆ 3, ಇಶಾಂತ್ 21ಕ್ಕೆ 3 ಮತ್ತು ಕುಲದೀಪ್ ಯಾದವ್ 35ಕ್ಕೆ 3 ವಿಕೆಟ್ ಪಡೆದರು. 6 ಮಂದಿ ಬೌಲರ್‌ಗಳು ಕಣಕ್ಕಿಳಿದಿದ್ದರು. ಈ ಪೈಕಿ ಆಫ್ ಸ್ಪಿನ್ನರ್ ಆರ್.ಅಶ್ವಿನ್, ವೇಗಿಗಳಾದ ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ನವ್‌ದೀಪ್ ಸೈನಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡರು.

ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟದಲ್ಲಿ 84 ರನ್ ಗಳಿಸಿತ್ತು. ಇದರೊಂದಿಗೆ 200 ರನ್‌ಗಳ ಮುನ್ನಡೆ ಸಾಧಿಸಿತ್ತು. ಅಂತಿಮ ದಿನವಾಗಿರುವ ಸೋಮವಾರ ಆಟ ಮುಂದುವರಿಸಿರುವ ಭಾರತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 125 ರನ್ ಗಳಿಸಿದೆ. ಹನುಮ ವಿಹಾರಿ ಅರ್ಧಶತಕ(64) ದಾಖಲಿಸಿದ್ದಾರೆ. ನಾಯಕ ಅಜಿಂಕ್ಯ ರಹಾನೆ 43 ರನ್ ಗಳಿಸಿಕ್ರೀಸ್‌ನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News