ವೈದ್ಯಕೀಯ ವಿದ್ಯಾರ್ಥಿಗಳ ಶುಲ್ಕ ನಿಗದಿ ತಾರತಮ್ಯ: ಮರುಪರಿಶೀಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2019-08-21 17:01 GMT

ಬೆಂಗಳೂರು, ಆ.21: ಮೆರಿಟ್ ಆಧಾರದ ಮೇಲೆ ಸರಕಾರಿ ಸೀಟು ಪಡೆದ ವೈದ್ಯಕೀಯ ವಿದ್ಯಾರ್ಥಿಗಳ ಶುಲ್ಕ ನಿಗದಿ ತಾರತಮ್ಯ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ ನಾಲ್ಕು ವಾರದಲ್ಲಿ ಮರುಪರಿಶೀಲಿಸಬೇಕೆಂದು ಆದೇಶಿಸಿದೆ. ಈ ಕುರಿತು ನಗರದ ಡಾ.ಕೆ.ಆರ್.ರವಿಕಿರಣ್ ಸೇರಿ 13 ವೈದ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದರಿಸಿದ್ದ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಬುಧವಾರ ಆದೇಶ ಪ್ರಕಟಿಸಿತು.

ಮೆರಿಟ್ ಆಧಾರದಲ್ಲಿ ಸರಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟುಗಳಿಗೆ 2017-18ರ ಶೈಕ್ಷಣಿಕ ಸಾಲಿನಲ್ಲಿ ನಿಗದಿಪಡಿಸಿದ್ದ 6 ಲಕ್ಷ ರೂ.ಶುಲ್ಕವನ್ನು 2018-19ರ ಸಾಲಿನಲ್ಲಿ 2,74,250 ರೂ.ಗಳಿಗೆ ಇಳಿಕೆ ಮಾಡಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಶುಲ್ಕ ನಿಗದಿಯಲ್ಲಿನ ತಾರತಮ್ಯ ಸರಿಪಡಿಸಲು ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಸರಕಾರ, ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಸಂಘ 4 ವಾರದಲ್ಲಿ ಮರು ಪರಿಶೀಲಿಸಬೇಕೆಂದು ನ್ಯಾಯಪೀಠವು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News