ರಾಜ್ಯದ ಸೋಲಾರ್ ರೂಫ್ ಟಾಪ್ ವಿಧಾನ ಅಳವಡಿಕೆಗೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಕರೆ

Update: 2019-08-22 17:17 GMT

ಬೆಂಗಳೂರು, ಆ.22: ಸೋಲಾರ್ ರೂಫ್ ಟಾಪ್ ಆಕರ್ಷಣೆ ಸೂಚ್ಯಂಕದಲ್ಲಿ ರಾಜ್ಯವು ದೇಶದಲ್ಲಿಯೇ ಅಗ್ರಸ್ಥಾನವನ್ನು ಪಡೆದಿದ್ದು, ಅಗ್ರಸ್ಥಾನದಲ್ಲಿರುವ ರಾಜ್ಯಗಳ ಸುಧಾರಿತ ವಿಧಾನಗಳನ್ನು ಇತರೆ ರಾಜ್ಯಗಳು ಅಳವಡಿಸಿಕೊಳ್ಳಲು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಕರೆ ನೀಡಿದ್ದಾರೆ.

ರಾಜ್ಯಗಳ ಮತ್ತು ರಾಜ್ಯದ ಇಂಧನ ಇಲಾಖೆಗಳ ವಿಮರ್ಶೆ, ಯೋಜನೆ ಮತ್ತು ಮೇಲ್ವೀಚಾರಣಾ ಸಭೆಯಲ್ಲಿ ಸೋಲಾರ್ ರೂಫ್ ಟಾಪ್ ಆಕರ್ಷಣೆ ಸೂಚ್ಯಂಕ- ‘ಸರಳ್’ ಅನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಸೌರನೀತಿಯ ಚೌಕಟ್ಟಿನ ದೃಢತೆ, ಅನುಷ್ಠಾನ ಪರಿಸರ, ಹೂಡಿಕೆ ವಾತಾವರಣ, ಗ್ರಾಹಕರ ಅನುಭವ ಹಾಗೂ ವಹಿವಾಟಿನ ವ್ಯವಸ್ಥೆಗಳು ಸರಳ್‌ನ 5 ಅಂಶಗಳು ಎಂದು ತಿಳಿಸಿದರು.

ಇನ್ನು, ಗ್ರಾಹಕರನ್ನು ಸಂವೇದನಾಶೀಲ ಮಾಡಲು ಮತ್ತು 2022 ರ ವೇಳೆಗೆ 2400 ಮೆಗಾ ವ್ಯಾಟ್‌ಗಳ ಎಂಎನ್‌ಆರ್‌ಇ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಬೆವಿಕಂ ವತಿಯಿಂದ ಆರ್ಥಿಕ ವರ್ಷ 2020ರ ಒಳಗೆ 100 ಮೆಗಾವ್ಯಾಟ್ ಗೃಹೋಪಯೋಗಿ ಮೇಲ್ಛಾವಣಿ ಯೋಜನೆಯ ಗುರಿ ಸಾಧಿಸಲು ಬೆವಿಕಂ ಸಜ್ಜಾಗುತ್ತಿದೆ ಹಾಗೂ ಸ್ಥಳೀಯ ಗ್ರಾಹಕರನ್ನು ಉತ್ತೇಜಿಸಲು ಕೇಂದ್ರ ಆರ್ಥಿಕ ಸಹಾಯಧನ ಅನ್ನು ಒದಗಿಸುವ ಸಲುವಾಗಿ ಎಂಎನ್‌ಆರ್‌ಇಗೆ ಒಂದು ಪ್ರಸ್ತಾವನೆಯನ್ನು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News