ಮೊದಲ ಟೆಸ್ಟ್ ಗೆ ವಿಂಡೀಸ್ ಆಲ್‌ರೌಂಡರ್ ಪಾಲ್ ಅಲನಭ್ಯ

Update: 2019-08-22 18:46 GMT

ಆ್ಯಂಟಿಗುವಾ, ಆ.22: ಮೊಣ ಕಾಲುನೋವಿನಿಂದ ಬಳಲುತ್ತಿರುವ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕೀಮೊ ಪಾಲ್ ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಪಾಲ್ ಬದಲಿಗೆ ಮಿಗುಯೆಲ್ ಕಮಿನ್ಸ್ ರನ್ನು ಕ್ರಿಕೆಟ್ ವೆಸ್ಟ್‌ಇಂಡೀಸ್ ನೇಮಕಗೊಳಿಸಿದೆ.

‘‘ಎಡ ಮೊಣಕಾಲಿನ ನೋವಿನಿಂದಾಗಿ ಕೀಮೊ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಅವರ ಬದಲಿಗೆ ತಂಡವನ್ನು ಸೇರಲಿರುವ ಕಮಿನ್ಸ್ ತಂಡಕ್ಕೆ ಬಲ ನೀಡಲಿದ್ದಾರೆ’’ ಎಂದು ವಿಂಡೀಸ್‌ನ ಹಂಗಾಮಿ ಮುಖ್ಯ ಕೋಚ್ ಫ್ಲಾಯ್ಡಾ ರೆಫೆರ್ ಹೇಳಿದ್ದಾರೆ.

ಕಮಿನ್ಸ್ ಮೂರು ವರ್ಷಗಳ ಹಿಂದೆ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 48 ರನ್‌ಗೆ ಆರು ವಿಕೆಟ್‌ಗಳನ್ನು ಉರುಳಿಸಿ ಜೀವನಶ್ರೇಷ್ಠ ಬೌಲಿಂಗ್ ಮಾಡಿದ್ದರು.

‘‘ಭಾರತ ಎ ವಿರುದ್ಧದ ಸರಣಿಯ ವೇಳೆ ನಾನು ಅವರನ್ನು ಗಮನಿಸುತ್ತಿದ್ದು, ಅವರೊಬ್ಬ ಕಠಿಣ ಪರಿಶ್ರಮಿ ಹಾಗೂ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ಆಡುವ ಅವಕಾಶ ಕಲ್ಪಿಸಿದರೆ ಈ ಸರಣಿಯನ್ನು ಗೆಲ್ಲುವ ನಮ್ಮ ಗುರಿ ಈಡೇರಿಸಲು ಅಮೂಲ್ಯ ಕೊಡುಗೆ ನೀಡುವುದು ನಿಶ್ಚಿತ’’ ಎಂದು ರೆಫೆರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News