ದ್ರೋಣಾಚಾರ್ಯ ಪ್ರಶಸ್ತಿ ನಿರೀಕ್ಷೆಗಿಂತ ಬೇಗನೆ ಲಭಿಸಿದೆ

Update: 2019-08-22 18:51 GMT

 ಮುಂಬೈ, ಆ.22: ನಾನು ದ್ರೋಣಾಚಾರ್ಯ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಆದರೆ,ಇಷ್ಟು ಬೇಗನೆ ಅದು ನನಗೆ ಲಭಿಸುತ್ತದೆ ಎಂದು ಯೋಚಿಸಿರಲಿಲ್ಲ ಎಂದು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಹಾಕಿ ಕೋಚ್ ಮೆರ್ಝ್‌ಬನ್ ಪಟೇಲ್ ತಿಳಿಸಿದ್ದಾರೆ.

ಮುಂಬೈ ಹಾಕಿ ವಲಯದಲ್ಲಿ ‘ಬಾವಾ’ಎಂದೇ ಖ್ಯಾತರಾಗಿರುವ 69ರ ಹರೆಯದ ಪಟೇಲ್ ಎಳೆಯ ವಯಸ್ಸಿನಲ್ಲಿ ಭವಿಷ್ಯದ ಒಲಿಂಪಿಯನ್‌ಗಳನ್ನು ರೂಪಿಸಿದ್ದರು. ಮುಂದಿನ ಆಟಗಾರರಿಗೆ ಸಲಹೆಗಾರನಾಗಿರಲು ಬಯಸುವ ಎಂದಿದ್ದಾರೆ

ಕೋಚ್ ಆಗಿ ಮೂರು ದಶಕಗಳ ಅನುಭವವಿರುವ ಪಟೇಲ್ ಒಲಿಂಪಿಯನ್ ಅಡ್ರಿಯನ್ ಡಿ’ಸೋಜಾ, ವಿರೇನ್ ರಸ್ಕೂನಾ ಹಾಗೂ ವಾಲ್ಮೀಕಿ ಸಹೋದರರಾದ ದೇವೇಂದ್ರ ಹಾಗೂ ಯುವರಾಜ್‌ಗೆ ಮೆಂಟರ್ ಆಗಿದ್ದಾರೆ. ಪಟೇಲ್ ಜೊತೆಗೆ ರಾಮ್‌ಬೀರ್ ಸಿಂಗ್(ಕಬಡ್ಡಿ) ಹಾಗೂ ಕ್ರಿಕೆಟ್ ಕೋಚ್ ಸಂಜಯ್ ಭಾರದ್ವಾಜ್ ಮುಂದಿನ ವಾರ ಹೊಸದಿಲ್ಲಿಯಲ್ಲಿ ನಡೆಯುವ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News