ಆ.26 ರಿಂದ ‘ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ’ ಅಭಿಯಾನ

Update: 2019-08-23 17:07 GMT

ಬೆಂಗಳೂರು, ಆ.23: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಕರ್ನಾಟಕ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ‘ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ’ ಎಂಬ ರಾಜ್ಯವ್ಯಾಪಿ ಅಭಿಯಾನವನ್ನು ಆ.26ರಿಂದ ಸೆ.1ರವರೆಗೆ ಮತ್ತು ಸಮ್ಮೇಳನವನ್ನು ಸೆ.8ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಗನೈಸೇಶನ್‌ನ ರಾಜ್ಯಾಧ್ಯಕ್ಷೆ ಉಮೈರ ಬಾನು, ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷ ಜನಾಬ್ ಅಮೀನುಲ್ ಹಸನ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ಮೊಹತರಮ ರಹಮತುನ್ನೀಸ ಹಾಗೂ ಹಿಂದ್‌ನ ರಾಜ್ಯ ಮುಖಂಡರು ಪಾಲ್ಗೊಳ್ಳಲಿದ್ದು, ಸರ್ವ ಧರ್ಮೀಯ ಯುವತಿಯರು ಹಾಗೂ ಮಹಿಳೆಯರು ಭಾಗವಹಿಸಬಹುದು ಎಂದು ತಿಳಿಸಿದರು.

ಜಿಐಓ ಕರ್ನಾಟಕವು ಯುವ, ಬಲಿಷ್ಠ, ಕ್ರಿಯಾತ್ಮಕ ಮತ್ತು ಯುವತಿಯರ ಸಂಘಟನೆಯಾಗಿದ್ದು, ರಾಜ್ಯಾದ್ಯಂತ ಒಂದು ದಶಕದಿಂದ ಚಾರಿತ್ರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಯುವತಿಯರಲ್ಲಿ ಚಾರಿತ್ರ ನಿರ್ಮಾಣದ ಬಗ್ಗ್ಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಅಲ್ಲದೆ, ನೈತಿಕ ವೌಲ್ಯಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News