'ಸೇ ನೋ ಟು ಪ್ಲಾಸ್ಟಿಕ್' ಅಭಿಯಾನ: ಹಾಲಿನ ಕವರ್‌ ವಾಪಸ್ ನೀಡಿದರೆ ಸಿಗಲಿದೆ ರಿಯಾಯಿತಿ !

Update: 2019-08-24 17:17 GMT

ಬೆಂಗಳೂರು, ಆ.24: ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮುಂದಾಗಿರುವ ಕೇಂದ್ರ ಸರಕಾರ ಸೇ ನೋ ಟು ಪ್ಲಾಸ್ಟಿಕ್ ಎಂಬ ಹೊಸ ಅಭಿಯಾನವನ್ನು ಹಮ್ಮಿಕೊಂಡಿದ್ದು, ಹಾಲಿನ ಕವರ್‌ಗಳನ್ನು ವಾಪಸ್ ನೀಡಿದರೆ ರಿಯಾಯಿತಿ ಸಿಗಲಿದೆ.

ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದ್ದು ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಲು ಮುಂದಾಗಿದೆ.

ಗ್ರಾಹಕರು ಹಾಲು ಹಾಗೂ ಹಾಲಿನ ಉತ್ಪನ್ನದ ಪ್ಯಾಕಿಂಗ್‌ಗೆ ಬಳಸಿರುವ ಪ್ಲಾಸ್ಟಿಕ್ ಕವರ್‌ಗಳನ್ನು ವಾಪಸ್ ನೀಡಿದರೆ ಅಂತಹ ಗ್ರಾಹಕರಿಗೆ ಹಾಲು, ಮೊಸರು, ಚೀಸ್, ಮಜ್ಜಿಗೆ, ಲಸ್ಸಿ ಮೇಲೆ ರಿಯಾಯಿತಿ ದೊರೆಯಲಿದೆ. ಇದರಿಂದ ಹಾಲಿ ಉತ್ಪನ್ನಕ್ಕೆ ಬಳಸುವ ಪ್ಲಾಸ್ಟಿಕ್ ಮರುಬಳಕೆ ಮಾಡಲು ಸುಲಭವಾಗಲಿದೆ. ಪರಿಸರ ಮಾಲಿನ್ಯ ತಪ್ಪಲಿದೆ. ಇಂತಹ ಒಂದು ಯೋಜನೆ ಅಕ್ಟೋಬರ್ 2ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News