ಗ್ರೇಟರ್ ನೋಯ್ಡ: ಮೆಂಥಾಲ್ ಉಗ್ರಾಣದಲ್ಲಿ ಭೀಕರ ಬೆಂಕಿ ಆಕಸ್ಮಿಕ

Update: 2019-08-26 04:09 GMT

ಗ್ರೇಟರ್ ನೋಯ್ಡ: ಇಲ್ಲಿನ ಕಾಸ್ನಾ ಪ್ರದೇಶದಲ್ಲಿರುವ ಮೆಂಥಾಲ್ ಉಗ್ರಾಣದಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ನೋಯ್ಡಿ ಹಾಗೂ ಗಾಝಿಯಾಬಾದ್‌ನಿಂದ ಆಗಮಿಸಿದ 18 ಅಗ್ನಿಶಾಮಕ ಎಂಜಿನ್‌ಗಳು ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿವೆ.

ದುರಂತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.

"ಸತತ ಮೂರು ಗಂಟೆಯಿಂದ ಬೆಂಕಿ ಉರಿಯುತ್ತಲೇ ಇದೆ. ದೊಡ್ಡ ಪ್ರಮಾಣದ ಮೆಂಥಾಲ್ ಆಯಿಲ್ ಉಗ್ರಾಣದಲ್ಲಿ ದಾಸ್ತಾನು ಇರುವ ಕಾರಣದಿಂದ ಬೆಂಕಿ ಶಮನಗೊಳಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ" ಎಂದು ಅಧಿಕಾರಿಗಳು ಹೇಳಿದ್ದಾರೆ.

"ನೂರಾರು ಮೆಂಥಾಲ್ ಆಯಿಲ್ ಡ್ರಮ್‌ಗಳು ಉಗ್ರಾಣದಲ್ಲಿದ್ದು, ಅವು ಸ್ಫೋಟಿಸುತ್ತಿವೆ" ಎಂದು ಅಗ್ನಿಶಾಮಕ ದಳ ಅಧಿಕಾರಿ ಅರುಣ್‌ ಕುಮಾರ್ ಸಿಂಗ್ ವಿವರಿಸಿದರು. ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಕಿ ಆಕಸ್ಮಿಕದ ಕಾರಣ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News