ಗೋಮಾಂಸ ಭಕ್ಷಣೆಯನ್ನು ಅಸ್ಪೃಶ್ಯತೆಗೆ ಥಳುಕು ಹಾಕಿದ ಆರೆಸ್ಸೆಸ್ ಮುಖಂಡ !

Update: 2019-08-27 07:14 GMT
ಕೃಷ್ಣ ಗೋಪಾಲ್

ಹೊಸದಿಲ್ಲಿ: ಪ್ರಾಚೀನ ಭಾರತದಲ್ಲಿ ಗೋಮಾಂಸ ಭಕ್ಷಣೆಯನ್ನು ಮಾಡುತ್ತಿದ್ದವರಿಗೆ ಅಸ್ಪೃಶ್ಯರೆಂದು ಕರೆಯಲಾಗುತ್ತಿತ್ತು. ಆದರೆ ಅಸ್ಪೃಶ್ಯತೆ ಅಥವಾ ದಲಿತ ಎಂಬ ಪದ ಪ್ರಾಚೀನ ಭಾರತದ ಸಾಹಿತ್ಯದಲ್ಲೆಲ್ಲೂ ಕಾಣಸಿಗುವುದಿಲ್ಲ ಎಂದು ಹಿರಿಯ ಆರೆಸ್ಸೆಸ್ ಮುಖಂಡ ಕೃಷ್ಣ ಗೋಪಾಲ್ ಹೇಳಿದ್ದಾರೆ.

ಸಂವಿಧಾನ ರಚನಾ ಸಮಿತಿ ಕೂಡಾ ದಲಿತ ಎಂಬ ಪದದ ಬದಲಾಗಿ ಪರಿಶಿಷ್ಟ ಜಾತಿ ಎಂದು ಉಲ್ಲೇಖಿಸಿದೆ ಎಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಹೇಳಿದರು. ದಲಿತ ಎಂಬ ಪದ ಬಳಕೆ ಬ್ರಿಟಿಷರ ಹುನ್ನಾರ ಎಂದು ಅವರು ಅಭಿಪ್ರಾಯಪಟ್ಟರು.

ಭಾರತ್ ಕಾ ರಾಜನೀತಿಕ್ ಉತ್ತರರಾಯಣ ಮತ್ತು ಭಾರತ್ ಕಾ ದಲಿತ್ ವಿಮರ್ಶಾ ಎಂಬ ಎರಡು ಕೃತಿಗಳನ್ನು ಕೃಷ್ಣಗೋಪಾಲ್ ಬಿಡುಗಡೆ ಮಾಡಿದರು. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಅವರೂ ಉಪಸ್ಥಿತರಿದ್ದರು.

"ಭಾರತದಲ್ಲಿ ಅಸ್ಪೃಶ್ಯರು ಎಂಬ ಮೊದಲ ಉದಾಹರಣೆ ಎಂದರೆ, ಗೋಮಾಂಸ ಸೇವಿಸುವವರನ್ನು ಅಸ್ಪೃಶ್ಯರು ಎಂದು ಕರೆದಿರುವುದು. ಅಂಬೇಡ್ಕರ್ ಕೂಡಾ ಅದನ್ನು ಬರೆದಿದ್ದಾರೆ. "ಭಾರತ್ ಲೆ ಅನ್‌ಟಚೆಬಿಲಿಟಿ ಆಯಿ ತೊ ಪೆಹ್ಲೆ ಉದಾರಣ್ ಹೈ ವೋ ಗಾಯ್ ಕಾ ಮಾಸ್ ಖಾತೆ ಥೆ ವಹ್ ಅನ್‌ಟಚೇಬಲ್ ಘೋಷಿತ್ ಹೈ, ಯೆಹ್ ಸ್ವಯಂ ಅಂಬೇಡ್ಕರ್ ಜೀ ನೇ ಭಿ ಲಿಖಾ ಹೈ" ಎಂದರು.

ಕ್ರಮೇಣ ಈ ಅಂಶ ಜನಸಾಮಾನ್ಯರ ತಲೆಯಲ್ಲಿ ಸುತ್ತಲಾರಂಭಿಸಿತು. ಸಮಾಜದ ಒಂದು ವರ್ಗವನ್ನು ಅಸ್ಪೃಶ್ಯರೆಂದು ಕರೆಯಲಾಯಿತು. ಅವರನ್ನು ಧೀರ್ಘಕಾಲದವರೆಗೆ ದಮನಿಸಿ, ಅವಮಾನಿಸಲಾಯಿತು. ರಾಮಾಯಣ ಬರೆದ ವಾಲ್ಮೀಕಿ ದಲಿತರಲ್ಲ; ಶೂದ್ರರು. ಹಲವು ಮಂದಿ ಋಷಿಗಳು ಕೂಡಾ ಶೂದ್ರರಾಗಿದ್ದರು ಮತ್ತು ಗೌರವಾರ್ಹರಾಗಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News