ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಸಮ್ಮತಿ

Update: 2019-08-27 07:32 GMT

ಬೆಂಗಳೂರು, ಆ,27: ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಅನರ್ಹಗೊಂಡ  ಶಾಸಕರ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ಸಮ್ಮತಿಸಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ ಹದಿನೇಳು ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಬಿಜೆಪಿಯನ್ನು ನಂಬಿ ಸರಕಾರವನ್ನು ಉರುಳಿಸಲು ಕಾರಣರಾದ ಶಾಸಕರು ಇದೀಗ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಸರಕಾರ ರಚನೆಯಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಾಸಕರಿಗೆ ಇದೀಗ ಅನರ್ಹತೆ ಮುಳುವಾಗಿ ಪರಿಣಮಿಸಿದೆ.

ಅನರ್ಹತೆಯನ್ನು ಪ್ರಶ್ನಿಸಿ  ಅನರ್ಹ ಶಾಸಕರು ಕಳೆದ ಜುಲೈನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಅರ್ಜಿಯನ್ನು  ತ್ವರಿತವಾಗಿ ಕೈಗೊಳ್ಳುವಂತೆ  ಶಾಸಕರು ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಪರ  ವಕೀಲರು ತ್ವರಿತ ವಿಚಾರಣೆ ಕೋರಿ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ್ದು, ರಿಜಿಸ್ಚ್ರಾರ್ ಅವರಿಗೆ ಪ್ರಕರಣವನ್ನು  ಲಿಸ್ಟ್ ಮಾಡಲು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News