ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧ ಸಡಿಲಿಕೆ ಕೋರಿ ಹೈಕೋರ್ಟ್‌ಗೆ ಅರ್ಜಿ

Update: 2019-08-27 17:00 GMT

ಬೆಂಗಳೂರು, ಆ.27: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರಕಾರ ಹೇರಿರುವ ನಿರ್ಬಂಧ ಸಡಿಲಿಕೆ ಕೋರಿ ಕಾಶ್ಮೀರ ಮೂಲದ ವಿದ್ಯಾರ್ಥಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಯನ್ನು ಆ.30ಕ್ಕೆ ಮುಂದೂಡಿದೆ.

ಈ ಕುರಿತು ಕಾಶ್ಮೀರ ಮೂಲದ ಎಸ್.ಪಿ.ಸುಹೈಲ್ ಅಹ್ಮದ್ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಎ.ಎಸ್.ವಿಶ್ವಾಜಿತ್ ಅವರು, ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಆದ ಬಳಿಕ ಅಲ್ಲಿಯ ಜನರೊಂದಿಗೆ ಸಂವಹನ ನಡೆಸಲು ಆಗುತ್ತಿಲ್ಲ. ಹೀಗಾಗಿ, ಈ ನಿರ್ಬಂಧವನ್ನು ಸಡಿಲಿಕೆಗೊಳಿಸಲು ಕೇಂದ್ರ, ರಾಜ್ಯ ಸರಕಾರ(ಜಮ್ಮು ಕಾಶ್ಮೀರ)ಕ್ಕೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಆ.30ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News