ಜಮ್ಮುವಿನ ಇನ್ನೂ 5 ಜಿಲ್ಲೆಗಳಲ್ಲಿ ಮೊಬೈಲ್ ಫೋನ್ ಸೇವೆ ಮರು ಆರಂಭ

Update: 2019-08-29 18:10 GMT

ಹೊಸದಿಲ್ಲಿ, ಆ. 29: ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಘೋಷಿಸಿದ ಹಾಗೂ ಜಮ್ಮುಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಬಳಿಕ ಆಗಸ್ಟ್ 5ರಿಂದ ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ಫೋನ್ ಸೇವೆಯನ್ನು ಜಮ್ಮುವಿನ 5 ಜಿಲ್ಲೆಗಳಲ್ಲಿ ಗುರುವಾರ ಮರು ಆರಂಭಿಸಲಾಗಿದೆ.

ಮೊಬೈಲ್ ಸೇವೆ ಮರು ಆರಂಭವಾದ ಜಿಲ್ಲೆಗಳೆಂದರೆ ದೋಡಾ ಕಿಸ್ತ್ವಾರ್, ರಾಂಬನ್, ರಾಜೌರಿ ಹಾಗೂ ಪೂಂಛ್. ಆಗಸ್ಟ್ 17ರಂದು ಐದು ಜಿಲ್ಲೆಗಳಾದ ಜಮ್ಮು ವಲಯದ ಜಮ್ಮು, ರಿಯಾಸಿ, ಸಾಂಬಾ, ಕಾಥು ಹಾಗೂ ಉಧಮ್‌ಪುರದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ ಮರು ಆರಂಭಿಸಲಾಗಿತ್ತು.

ಕಳೆದ ವಾರ ಕೇಂದ್ರ ಕಾಶ್ಮೀರದ ಬುಡ್ಗಾಂವ್, ಸೋನಾಮಾರ್ಗ್, ಮನಿಗಮ್ ಪ್ರದೇಶ, ಉತ್ತರ ಕಾಶ್ಮೀರದ ಗುರೇಜ್, ತಂಗಮಾರ್ಗ್, ಉರಿ ಕೇರನ್ ಕರ್ನಾಹ್ ಹಾಗೂ ತಂಗ್ದಾರ್ ಪ್ರದೇಶದಲ್ಲಿ ಲ್ಯಾಂಡ್‌ಲೈನ್ ದೂರವಾಣಿ ಸೇವೆ ಮರು ಆರಂಭಿಸಲಾಗಿತ್ತು. ಆದರೆ, ಸಂಪರ್ಕ ನ್ಯೂನತೆ ಬಗ್ಗೆ ಗ್ರಾಹಕರು ದೂರಿದ್ದರು. ಆಗಸ್ಟ್ 5ರ ನಂತರ ಭದ್ರತೆ ಹಾಗೂ ಸಂವಹನ ನಿರ್ಬಂಧ ವಿಧಿಸಲಾಗಿತ್ತು. ಜನರ ಚಲನವಲನದ ಮೇಲೆ ಕೂಡ ನಿರ್ಬಂಧ ಹೇರಲಾಗಿತ್ತು. ಎಲ್ಲ ಉನ್ನತ ನಾಯಕರನ್ನು ಸೆಂಟೌರ್ ಹೊಟೇಲ್‌ನಲ್ಲಿ ಬಂಧನದಲ್ಲಿ ಇರಿಸಲಾಗಿತ್ತು. ರಾಜ್ಯ ಪ್ರವೇಶಿಸಲು ಬಯಸಿದ ಪ್ರತಿಪಕ್ಷದ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ಹಿಂದೆ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News