×
Ad

ಗಾಂಜಾ ಮಾರಾಟ: ಐವರ ಬಂಧನ

Update: 2019-08-30 23:58 IST

ಬೆಂಗಳೂರು, ಆ.30: ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಆಗ್ನೇಯ ಭಾಗದ ಪೊಲೀಸರು 10 ಕೆಜಿ 300 ಗ್ರಾಂ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್‌ಆರ್‌ಕೆ ಗಾರ್ಡನ್ ನಿವಾಸಿ ಮುಹಮ್ಮದ್ ಝೈನ್(23), ಮಡಿವಾಳದ ರೋಹಿತ್ ರಾಥೋಡ್(19), ರಾಮನಗರದ ಐಜೂರಿನ ಇರ್ಷದ್(35) ಝಾಬಿ ಪಾಷ (23) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ಜೋನಪ್ಪಸೆರೆ: ಹೊಂಗಸಂದ್ರದ ಓಣಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತಮಿಳುನಾಡಿನ ಹೊಸೂರಿನ ಜೋನಪ್ಪ(30)ನನ್ನು ಬಂಧಿಸಿ 3 ಲಕ್ಷ ಮೌಲ್ಯದ 5 ಕೆಜಿ 122 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ.

ಆರೋಪಿಯು ತಮಿಳುನಾಡಿನಿಂದ ಗಾಂಜಾ ತಂದು ಹೊಂಗಸಂದ್ರ, ಬೊಮ್ಮನಹಳ್ಳಿ ಇನ್ನಿತರ ಹೊರ ವಲಯದ ಪ್ರದೇಶಗಳಲ್ಲಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News