ಮಧ್ಯಪ್ರದೇಶ: ‘ಗೋಟ್‌ಮಾರ್’: 168ಕ್ಕೂ ಅಧಿಕ ಜನರಿಗೆ ಗಾಯ

Update: 2019-09-01 17:38 GMT

ಛಿಂದ್ವಾರಾ, ಸೆ. 1: ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದ ವಾರ್ಷಿಕ ‘ಗೋಟ್‌ಮಾರ್’ (ಕಲ್ಲು ತೂರಾಟ) ಉತ್ಸವದಲ್ಲಿ 168ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ‘‘168 ಮಂದಿ ಗಾಯಗೊಂಡಿದ್ದಾರೆ’’ ಎಂದು ಛಿಂದ್ವಾರ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀನಿವಾಸ್ ಶರ್ಮಾ ಹೇಳಿದ್ದಾರೆ.

ಉತ್ಸವ ನಡೆದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಡ್ರೋನ್‌ಗಳ ಮೂಲಕ ಕಣ್ಗಾವಲು ಇರಿಸಲಾಗಿದೆ. ಕಲ್ಲು ತೂರಾಟ ನಡೆಸಲು ಕವಣೆ ಬಳಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ. ಉತ್ಸವದ ಸಂದರ್ಭ ಪಂದುರ್ನಾ ಹಾಗೂ ಸವರ್‌ಗಾಂವ್ ಗ್ರಾಮಗಳ ನಿವಾಸಿಗಳು ಜಾಮ್ ನದಿಯ ಎರಡು ದಂಡೆಗಳಲ್ಲಿ ನಿಂತು ಕಲ್ಲು ತೂರಾಟ ನಡೆಸುತ್ತಾರೆ. ಇದು ಶತಮಾನಗಳ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News