×
Ad

4ನೇ ತರಗತಿ ವಿದ್ಯಾರ್ಥಿನಿಯಿಂದ ಕವನ ಸಂಕಲನ ಪ್ರಕಟ

Update: 2019-09-01 23:11 IST

ಬೆಂಗಳೂರು, ಸೆ.1: ನಗರದ ವಿಬ್ ಗಯಾರ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮಾನ್ಯಾ ಕವನಗಳನ್ನು ಬರೆದು ‘ನೇಚರ್ ಅವರ್ ಫ್ಯೂಚರ್’ ಎಂಬ ಶೀರ್ಷಿಕೆಯಡಿ ಕವನ ಸಂಕಲನ ಪ್ರಕಟಿಸುವ ಮೂಲಕ ಭಾರತದ ಅತ್ಯಂತ ಕಿರಿಯ ಕವಯತ್ರಿ ಎಂಬ ಬಿರುದಿಗೆ ಪಾತ್ರವಾಗಿದ್ದಾಳೆ.

ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಿಂದ ಗ್ರ್ಯಾಂಡ್ ಮಾಸ್ಟರ್, ಇಂಡಿಯಾ ಬುಕ್ ಆ್ ರೆಕಾರ್ಡ್ಸ್, ವಜ್ರ ವರ್ಲ್ಡ್ ರೆಕಾರ್ಡ್‌ನಿಂದ ಅತ್ಯಂತ ಕಿರಿಯ ಕವಯತ್ರಿ ಎಂಬ ಮಾನ್ಯತೆಯನ್ನೂ ಪಡೆದುಕೊಂಡಿದ್ದಾರೆ.

2019ರ ಜುಲೈ 5ರಂದು ಪ್ರಕಟಗೊಂಡ ‘ನೇಚರ್ ಅವರ್ ಫ್ಯೂಚರ್’ ಪುಸ್ತಕ 55 ಕವನಗಳನ್ನು ಒಳಗೊಂಡಿದ್ದು, ಇದು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿದೆ. ದೇಶಪ್ರೇಮ, ಸೈನಿಕರ ತ್ಯಾಗ-ಬಲಿದಾನ, ಪರಿಸರ, ಹೆಣ್ಣಿನ ಮಹತ್ವ ಕುರಿತಾದ ಕವನಗಳನ್ನು ಒಳಗೊಂಡಿದೆ.

2018ರಲ್ಲಿ ಕಿಡ್ ವರ್ಲ್ಡ್ ಅಂತಾರಾಷ್ಟ್ರೀಯ ಸಣ್ಣ ಕಥೆಗಳ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಈಕೆ ರಚಿಸಿದ, ‘ಥ್ಯಾಂಕ್ಸ್ ಗಿವಿಂಗ್’ ಸಣ್ಣ ಕಥೆಯೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಈಕೆಯ ಸಾಧನೆ ಬಗ್ಗೆ ಇವರ ಪೋಷಕರಾದ ಚಿತ್ರಾ ಮತ್ತು ಹರ್ಷ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News