×
Ad

ಕ್ರಿಕೆಟಿಗ ಮುಹಮ್ಮದ್ ಶಮಿ ಬಂಧನಕ್ಕೆ ವಾರೆಂಟ್ ಜಾರಿ

Update: 2019-09-02 19:19 IST

ಕೋಲ್ಕತಾ, ಸೆ.2: ಪತ್ನಿ ಹಸೀನ್ ಜಹಾನ್ ಅವರು ದಾಖಲಿಸಿರುವ ಕೌಟುಂಬಿಕ ದೌರ್ಜನ್ಯ  ಪ್ರಕರಣಕ್ಕೆ ಸಂಬಂಧಿಸಿ ಭಾರತದ ವೇಗದ ಬೌಲರ್  ಮೊಹಮ್ಮದ್ ಶಮಿ ಮತ್ತು ಅವರ ಸಹೋದರ ಹಾಸಿದ್  ಅಹ್ಮದ್ ವಿರುದ್ಧ ಪಶ್ಚಿಮ ಬಂಗಾಳದ ಅಲಿಪೋರ್ ನ್ಯಾಯಾಲಯವು ಬಂಧನಕ್ಕೆ  ವಾರೆಂಟ್ ಹೊರಡಿಸಿದೆ.

  ಮೊಹಮ್ಮದ್ ಶಮಿ ಮತ್ತು ಅವರ ಸಹೋದರ ಹಾಸಿದ್  ಅಹ್ಮದ್ ಗೆ ನ್ಯಾಯಾಲಯವು 15 ದಿನಗಳಲ್ಲಿ ಶರಣಾಗುವಂತೆ  ಆದೇಶ ನೀಡಿದ್ದು,  ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ  ನೀಡಿದೆ. ಶಮಿ ಇದೀಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ.

2018ರ ಆರಂಭದಲ್ಲಿ, ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಅವರು ಕೌಟುಂಬಿಕ ದೌರ್ಜನ್ಯದ  ಆರೋಪ ಮಾಡಿದ್ದರು. ಶಮಿ ಮತ್ತು ಅವರ  ಸಹೋದರನ ಮೇಲೆ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News