ಅಲೆಕ್ಸಾಂಡರ್ ಝ್ವೆರೆವ್‌ಗೆ ಶಾಕ್ ನೀಡಿದ ಡಿಯಾಗೊ

Update: 2019-09-03 18:54 GMT

ನ್ಯೂಯಾರ್ಕ್, ಸೆ.3: ಅರ್ಜೆಂಟೀನದ ಡಿಯಾಗೊ ಸ್ವೆಟ್ಜರ್ಮನ್ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್‌ರನ್ನು 3-6, 6-2, 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು.

ಆರನೇ ಶ್ರೇಯಾಂಕದ ಝ್ವೆರೆವ್‌ಗೆ ಆಘಾತ ನೀಡಿದ ಡಿಯಾಗೊ ಯುಎಸ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು.

ಡಿಯಾಗೊ ಈ ಹಿಂದಿನ ಯಾವುದೇ ಪಂದ್ಯಗಳಲ್ಲಿ ಎರಡು ಗಂಟೆಗಿಂತ ಹೆಚ್ಚು ಸಮಯ ಟೆನ್ ಕೋರ್ಟ್‌ನಲ್ಲಿ ಹೋರಾಡಿದ ನಿದರ್ಶನವಿಲ್ಲ. ಝ್ವೆರೆವ್ ವಿರುದ್ಧ ಪಂದ್ಯದಲ್ಲಿ ಮೂರು ಗಂಟೆಗೂ ಅಧಿಕ ಸಮಯ ಹೋರಾಟ ನಡೆಸಿ ಗೆಲುವು ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News