ಹಾಲಿ ಚಾಂಪಿಯನ್ ನವೊಮಿ ಒಸಾಕಾ ಸವಾಲು ಅಂತ್ಯ

Update: 2019-09-03 18:57 GMT

 ನ್ಯೂಯಾರ್ಕ್, ಸೆ.3: ಯು.ಎಸ್. ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ನವೊಮಿ ಒಸಾಕಾ ಅವರ ಸವಾಲು ಅಂತ್ಯಗೊಂಡಿದೆ.

ಸೋಮವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ವಿಸ್ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ ಜಪಾನ್ ಆಟಗಾರ್ತಿ ಒಸಾಕಾರನ್ನು 7-5, 6-4 ಸೆಟ್‌ಗಳಿಂದ ಸೋಲಿಸಿ ಎರಡನೇ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಮಳೆಯಿಂದಾಗಿ ಅರ್ಥರ್ ಅಶೆ ಸ್ಟೇಡಿಯಂನ ಮುಚ್ಚಿದ ಮೇಲ್ಛಾವಣಿಯ ಕೆಳಗೆ ಆಡಿದ ಬೆನ್ಸಿಕ್ ಉತ್ತಮ ಆರಂಭ ಪಡೆದಿದ್ದು, ಮೊದಲ ಸೆಟನ್ನು 7-5 ಅಂತರದಿಂದ ವಶಪಡಿಸಿಕೊಂಡರು. ಎರಡನೇ ಸೆಟ್‌ನಲ್ಲೂ ಪ್ರಾಬಲ್ಯ ಮುಂದುವರಿಸಿದ ಬೆನ್ಸಿಕ್ ಅಗ್ರ ಶ್ರೇಯಾಂಕದ ಒಸಾಕಾರನ್ನು 6-4 ಅಂತರದಿಂದ ಮಣಿಸಿದರು. ಎಡ ಮಂಡಿನೋವಿನ ಸಮಸ್ಯೆ ಎದುರಿಸುತ್ತಿರುವ ಒಸಾಕಾ ಅದರಿಂದ ಚೇತರಿಸಿಕೊಳ್ಳಲು ವಿಫಲರಾಗಿದ್ದು ಅವರ ಆಟದ ವೇಳೆ ಎದ್ದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News