‘ಬಿಗ್ ಬಿ’ ರಿಸರ್ವ್ ಬ್ಯಾಂಕ್ ಗೆ ಬೀಗ ಜಡಿಯುವುದನ್ನು ತಪ್ಪಿಸಿದ್ದು ಹೀಗೆ…

Update: 2019-09-05 10:11 GMT

ಬುಧವಾರ ರಾತ್ರಿ ಪ್ರಸಾರವಾದ ಜನಪ್ರಿಯ ‘ಕೌನ್ ಬನೇಗಾ ಕರೋಡ್ ‍ಪತಿ’ ಕಾರ್ಯಕ್ರಮದಲ್ಲಿ ಬ್ಯಾಂಕ್ ಸಂಬಂಧಿತ ಒಂದು ಪ್ರಶ್ನೆಯ ವಿಚಾರದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸಿಡಿಸಿದ ಹಾಸ್ಯ ಚಟಾಕಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿ ಬಿಟ್ಟಿತು.

ಬುಧವಾರದ ಸ್ಪರ್ಧಾಳು ಹರ್ಯಾಣದ ಯಮುನಾ ನಗರ ನಿವಾಸಿ ನೇಹಾ ಮಲ್ಹೋತ್ರಾ ಓರ್ವ ಬ್ಯಾಂಕ್ ಉದ್ಯೋಗಿಯಾಗಿದ್ದರು. “ಈ ಕೆಳಗಿನ ಯಾವ ಬ್ಯಾಂಕುಗಳಿಂದ ನೀವು ವೈಯಕ್ತಿಕ ಸಾಲ ಪಡೆಯಲು ಸಾಧ್ಯವಿಲ್ಲ?'' ಎಂಬ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಅವುಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.

ಆಯ್ಕೆ `ಡಿ' ಲಾಕ್ ಮಾಡಿ ಎಂದು ನೇಹಾ  ಹೇಳಿದಾಗ ಬಚ್ಚನ್ ‘ಆರ್ ಯು ಶುವರ್?, ನೀವು ಬಹಳ ಬೇಗ ಉತ್ತರಿಸಿದ್ದೀರಿ,'' ಎಂದರು. ಆಗ ನೇಹಾ “ಸರ್ ಇದು ನನ್ನ ಪ್ರಶ್ನೆ, ಇದು ಬ್ಯಾಂಕ್‍ಗೆ ಸಂಬಂಧಿಸಿದ್ದು” ಎಂದರು.

ಆಗ ಬಚ್ಚನ್ ಮತ್ತೆ ಕೇಳಿದರು “ನಾನೇನು ಮಾಡಲಿ ?'' ಅದಕ್ಕೆ ನೇಹಾ ``ಪ್ಲೀಸ್ ಲಾಕ್ ಮಾಡಿ ಬಿಡಿ ಸರ್' ಎಂದರು. ಆಗ ಬಚ್ಚನ್ ತಮ್ಮ ಎಂದಿನ ಶೈಲಿಯಲ್ಲಿ ``ಕಂಪ್ಯೂಟರ್ ಜೀ ಪ್ಲೀಸ್ ಲಾಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'' ಎಂದು ಹೇಳಬೇಕೆನ್ನುವಷ್ಟರಲ್ಲಿ ಅರ್ಧದಲ್ಲಿಯೇ ಮಾತು ನಿಲ್ಲಿಸಿ “ದೇವರೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವತ್ತೂ ಮುಚ್ಚದೇ ಇರಲಿ,'' ಎಂದರು. ``ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೆ ತಾಲಾ ಲಗಾಯ ಜಾಯೆ'' ಎಂದು ಹೇಳುವ ಬದಲು ಬಚ್ಚನ್ `ಕಂಪ್ಯೂಟರ್ ಜೀ ಆಪ್ಶನ್ ಡಿ ಪೆ ತಾಲಾ ಲಗಾಯ ಜಾಯೆ'' ಎಂದರು.

ಬಚ್ಚನ್ ಮುಂದಿನ ಪ್ರಶ್ನೆಗೆ ಸಾಗ ಬೇಕೆನುವಷ್ಟರಲ್ಲಿ ಸಭಿಕರು ನಗೆಗಡಲಿನಲ್ಲಿ ತೇಲಿದರು. ಈ ಶೋ ನಲ್ಲಿ ನೇಹಾ ರೂ 6.40 ಲಕ್ಷ ಗೆದ್ದರು. ನಾಸಾ ಕುರಿತ ಪ್ರಶ್ನೆಗೆ ಅವರಿಗೆ ಉತ್ತರಿಸಲು ಸಾಧ್ಯವಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News