​ತೆಂಡೂಲ್ಕರ್ ದಾಖಲೆ ಹಿಂದಿಕ್ಕಿದ ಸ್ಟೀವನ್ ಸ್ಮಿತ್

Update: 2019-09-06 04:05 GMT

ಹೊಸದಿಲ್ಲಿ, ಸೆ.6: ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ 211 ರನ್ ಸಿಡಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದರು.

ಕೇವಲ 121 ಟೆಸ್ಟ್‌ಗಳಲ್ಲಿ 26 ಶತಕಗಳನ್ನು ಸಿಡಿಸಿದ ಸ್ಮಿತ್, ಅತಿವೇಗವಾಗಿ 26 ಶತಕ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿ, ಮಾಸ್ಟರ್ ಬ್ಲಾಸ್ಟರ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದರು. ಕೇವಲ 69 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವ ಕ್ರಿಕೆಟ್‌ನ ದಂತಕಥೆ ಡಾನ್‌ ಬ್ರಾಡ್‌ಮನ್ ಪಟ್ಟಿಯಲ್ಲಿ ಅಗ್ರಸ್ಥಾನಿ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೆಲ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ದಿನವಾದ ಗುರುವಾರ ಸ್ಮಿತ್ ಈ ಸಾಧನೆ ಮಾಡಿದರು. ಸಚಿನ್ ತೆಂಡೂಲ್ಕರ್ 136 ಟೆಸ್ಟ್‌ಗಳಲ್ಲಿ 26 ಶತಕ ಸಾಧಿಸಿದ್ದರು. ಸುನೀಲ್ ಗಾವಸ್ಕರ್ (144) ಮತ್ತು ಮ್ಯಾಥ್ಯೂ ಹೇಡನ್ (145) ಈ ಸಾಧಕರ ಪಟ್ಟಿಯಲ್ಲಿರುವ ಇತರರು.

ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ 144 ಹಾಗೂ 142 ರನ್ ಗಳಿಸಿದ ಸ್ಮಿತ್, ಆಸ್ಟ್ರೇಲಿಯಾದ ದೊಡ್ಡ ಅಂತರದ ಜಯಕ್ಕೆ ಕಾರಣರಾಗಿದ್ದರು. ಎರಡನೇ ಟೆಸ್ಟ್‌ನಲ್ಲಿ ಆದ ಗಾಯದಿಂದಾಗಿ ಮೂರನೇ ಟೆಸ್ಟ್ ತಪ್ಪಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News