ಭಾರತದ ಪುರುಷರ ತಂಡಕ್ಕೆ ರಶ್ಯ ಎದುರಾಳಿ

Update: 2019-09-09 18:28 GMT

► ಅಮೆರಿಕವನ್ನು ಎದುರಿಸಲಿರುವ ಮಹಿಳಾ ತಂಡ

 ಲೌಸನ್ನೆ, ಸೆ.9: ಸ್ವಿಟ್ಝರ್‌ಲೆಂಡ್‌ನ ಲೌಸನ್ನೆಯಲ್ಲಿ ಮುಂಬರುವ ಟೋಕಿಯೊ ಒಲಿಂಪಿಕ್ ಗೇಮ್ಸ್‌ನ ಹಾಕಿ ಕ್ವಾಲಿಫೈಯರ್ಸ್‌ಗೆ ಡ್ರಾ ಪ್ರಕಟಗೊಂಡಿದ್ದು, ಅರ್ಹತಾ ಸುತ್ತಿನಲ್ಲಿ ಆಡಲಿರುವ 14 ಹಾಕಿ ತಂಡಗಳು ಹಣಾಹಣಿ ನಡೆಸಲಿದೆ.

ಭಾರತದ ಪುರುಷರ ತಂಡ ಅರ್ಹತಾ ಪಂದ್ಯದಲ್ಲಿ ರಶ್ಯವನ್ನು ಮಹಿಳಾ ತಂಡ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ.

 ಪುರುಷರ ತಂಡಗಳಾದ ಅರ್ಜೆಂಟೀನ, ದಕ್ಷಿಣ ಆಫ್ರಿಕ, ಬೆಲ್ಜಿಯಂ, ಆಸ್ಟ್ರೇಲಿಯ ಮತ್ತು ಜಪಾನ್(ಆತಿಥೇಯ ತಂಡ) , ಮಹಿಳೆಯರ ವಿಭಾಗದಲ್ಲಿ ಅರ್ಜೆಂಟೀನ, ದಕ್ಷಿಣ ಆಫ್ರಿಕ, ನೆದರ್‌ಲೆಂಡ್, ನ್ಯೂಝಿಲ್ಯಾಂಡ್ ಮತ್ತು ಜಪಾನ್(ಆತಿಥೇಯ ತಂಡ) ಈಗಾಗಲೇ ನೇರ ಪ್ರವೇಶ ಪಡೆದಿದೆ.

ಕ್ವಾಲಿಫೈಯರ್ಸ್ ಪಂದ್ಯಗಳು ಅಕ್ಟೋಬರ್ 25ರಿಂದ 27 ಮತ್ತು ನವೆಂಬರ್ 1ರಿಂದ 3ರ ತನಕ ನಡೆಯಲಿದೆ.

ಪುರುಷರ ಟೂರ್ನಿಯಲ್ಲಿ ಎದುರಾಳಿಗಳು

► ಜರ್ಮನಿ -ಆಸ್ಟ್ರೇಲಿಯ

► ಭಾರತ-ರಶ್ಯ

► ನೆದರ್‌ಲೆಂಡ್-ಪಾಕಿಸ್ತಾನ

► ಸ್ಪೇನ್-ಫ್ರಾನ್ಸ್

► ಕೆನಡಾ-ಐರ್ಲೆಂಡ್

► ಗ್ರೇಟ್ ಬ್ರಿಟನ್-ಮಲೇಶ್ಯ

► ನ್ಯೂಝಿಲ್ಯಾಂಡ್-ಕೊರಿಯಾ

ಮಹಿಳೆಯರ ವಿಭಾಗ

► ಜರ್ಮನಿ- ಇಟಲಿ

► ಆಸ್ಟ್ರೇಲಿಯ -ರಶ್ಯ

► ಗ್ರೇಟ್ ಬ್ರಿಟನ್-ಚಿಲಿ

► ಭಾರತ-ಅಮೆರಿಕ

► ಚೀನಾ -ಬೆಲ್ಜಿಯಂ

► ಐರ್ಲೆಂಡ್-ಕೆನೆಡಾ

► ಸ್ಪೇನ್-ಕೊರಿಯಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News