ಮೊದಲ ಅನಧಿಕೃತ ಟೆಸ್ಟ್ ದ.ಆಫ್ರಿಕ ಎ 164ಕ್ಕೆ ಆಲೌಟ್

Update: 2019-09-09 18:35 GMT

 ತಿರುವನಂತಪುರ, ಸೆ.9: ನಾಲ್ಕು ದಿನಗಳ ಮೊದಲ ಅನಧಿಕೃತ ಟೆಸ್ಟ್‌ನ ಮೊದಲ ದಿನ ದಕ್ಷಿಣ ಆಫ್ರಿಕ ಎ ತಂಡವನ್ನು ಭಾರತ ಎ ಮೊದಲ ಇನಿಂಗ್ಸ್‌ನಲ್ಲಿ 164ಕ್ಕೆ ನಿಯಂತ್ರಿಸಿದ್ದು, ಮೇಲುಗೈ ಸಾಧಿಸುವ ಕಡೆಗೆ ಹೆಜ್ಜೆ ಇರಿಸಿದೆ,

 ದಿನದ ಆಟ ನಿಂತಾಗ ಭಾರತ ಎ ತಂಡ 38 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸಿದೆ. ಶುಬ್‌ಮನ್ ಗಿಲ್ ಔಟಾಗದೆ 66 ರನ್ ಮತ್ತು ಅಂಕಿತ್ ಬಾವ್ನೆ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಭಾರತದ ಇನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್‌ವಾಡ್ ಮತ್ತು ನಾಯಕ ಶುಬ್‌ಮನ್ ಗಿಲ್ ಮೊದಲ ವಿಕೆಟ್‌ಗೆ 12.3 ಓವರ್‌ಗಳಲ್ಲಿ 48 ರನ್ ಗಳಿಸಿದರು. 30 ರನ್ ಗಳಿಸಿದ ಗಾಯಕ್‌ವಾಡ್ ಅವರು ಮಾರ್ಕೊ ಜಾನ್ಸೆನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಎರಡನೇ ವಿಕೆಟ್‌ಗೆ ರಿಕಿ ಬುಯ್ ಮತ್ತು ಗಿಲ್ ಎರಡನೇ ವಿಕೆಟ್‌ಗೆ58 ರನ್ ಸೇರಿಸಿದರು. ರಿಕಿ ಬುಯಿ 26 ರನ್ ಗಳಿಸಿ ಲುಂಗಿ ಗಿಡಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ಶುಬ್‌ಮನ್ ಗಿಲ್ ಮತ್ತು ಬಾವ್ನೆ ಭಾರತ ಎ ತಂಡದ ಬ್ಯಾಟಿಂಗ್ ಮುನ್ನಡೆಸಿದರು.

ಇದಕ್ಕೂ ಮೊದಲು ದಕ್ಷಿಣ ಆಫ್ರಿಕ ತಂಡ ಶಾರ್ದುಲ್ ಠಾಕೂರ್(29ಕ್ಕೆ3), ಕೃಷ್ಣಪ್ಪ ಗೌತಮ್ (64ಕ್ಕೆ 3), ಶಾಹಬಾಝ್ ನದೀಮ್ (37ಕ್ಕೆ 2) ಮತ್ತು ಮುಹಮ್ಮದ್ ಸಿರಾಜ್(20ಕ್ಕೆ 1) ದಾಳಿಗೆ ಸಿಲುಕಿ 51.5 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟಾಗಿತ್ತು.

 ಆಫ್ರಿಕದ ಮಾರ್ಕೊ ಜಾನ್ಸೆನ್ (45) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಸಂಕ್ಷಿಪ್ತ ಸ್ಕೋರ್

► ದ. ಆಫ್ರಿಕ ಎ: 51.5 ಓವರ್‌ಗಳಲ್ಲಿ ಆಲೌಟ್ 164 (ಜಾನ್ಸೆನ್ ಔಟಾಗದೆ 45, ಡಾನೆ ಪೀಡ್ 33; ಠಾಕೂರ್ 29ಕ್ಕೆ 3, ಕೆ.ಗೌತಮ್ 64ಕ್ಕೆ 3).

► ಭಾರತ ಎ 38 ಓವರ್‌ಗಳಲ್ಲಿ 129/2 (ಗಿಲ್ ಔಟಾಗದೆ 66, ಗಾಯಕ್‌ವಾಡ್ 30, ಋತು ಭುಯ್ 26).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News