ಬಿಎಂಟಿಸಿ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಸಿದ್ಧತೆ

Update: 2019-09-10 16:48 GMT

ಬೆಂಗಳೂರು, ಸೆ.10: ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಬಿಎಂಟಿಸಿಯ 1 ಸಾವಿರ ಬಸ್ ಹಾಗೂ 32 ಬಸ್ ನಿಲ್ದಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಕೇಂದ್ರದಿಂದ ತನಗೆ ನೀಡಿದ ಅನುದಾನದಲ್ಲಿ ನಿರ್ಭಯಾ ಯೋಜನೆಯಡಿ ಗುಲಾಬಿ ಸಾರಥಿ ಸೇವೆ ಆರಂಭ ಮಾಡಿದ್ದು, 25 ಪಿಂಕ್ ಸಾರಥಿ ವಾಹನಗಳನ್ನು ನಿಲುಗಡೆ ಮತ್ತು ನಿಲ್ದಾಣಗಳಲ್ಲಿ ಪರಿವೀಕ್ಷಣೆ ನಡೆಸಲಾಗುತ್ತಿದೆ. ಅದರ ಜತೆಗೆ ಇದನ್ನೂ ಸೇರ್ಪಡೆ ಮಾಡಲಾಗಿದೆ.

56.5 ಕೋಟಿ ವೆಚ್ಚ: ನಿರ್ಭಯಾ ಅನುದಾನದ ಅಡಿಯಲ್ಲಿ ಬಿಎಂಟಿಸಿಗೆ ಕೇಂದ್ರ ಸರಕಾರ 56.5 ಕೋಟಿ ರೂ.ಗಳು ನೀಡಿದೆ. ಅದರಲ್ಲಿ ಈಗ 27 ಕೋಟಿ ರೂ.ಗಳ ವೆಚ್ಚದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲು ನಿರ್ಧಾರ ಮಾಡಲಾಗಿದೆ.

ಬಿಎಂಟಿಸಿಯಲ್ಲಿ 6,400 ಬಸ್‌ಗಳಿದ್ದು, ಈಗಾಗಲೇ 800 ಬಸ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಉಳಿದ ಬಸ್‌ಗಳ ಪೈಕಿ ಇದೀಗ ಒಂದು ಸಾವಿರ ಬಸ್‌ಗಳಲ್ಲಿ ಹಾಗೂ 32 ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News