ಕತರ್: ಕ್ಯೂಐಎಸ್ಎಫ್ ವತಿಯಿಂದ ‘ಸ್ವಾತಂತ್ರ್ಯದ ಕಾವಲುಗಾರರಾಗಿ’ ಜನಜಾಗೃತಿ ಸಭೆ

Update: 2019-09-11 07:01 GMT

ಕತರ್: ಕತರ್ ಇಂಡಿಯನ್ ಸೋಶಿಯಲ್ ಫೋರಂ (ಕ್ಯೂಐಎಸ್ಎಫ್) ಆಯೋಜಿಸಿದ್ದ ಕಾರ್ನರ್ ಮೀಟ್ ಗಳು ಇತ್ತೀಚೆಗೆ ಕತರ್ ನ ಮದೀನಾ ಖಲೀಫ ಹಾಗೂ ಲುಕ್ತಾದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಇಮ್ರಾನ್ ದೇರಳಕಟ್ಟೆ ಪ್ರಾಸ್ತಾವಿಕ ಭಾಷಣದೊಂದಿಗೆ ಕ್ಯೂಐಎಸ್ಎಫ್ ನ ಕಾರ್ಯವೈಖರಿಯ ಬಗ್ಗೆ ಪರಿಚಯ ನೀಡಿದರು.

ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ದಿನದಿಂದ, ದಲಿತರ ಮತ್ತು ಅಲ್ಪಸಂಖ್ಯಾಂತರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆ ಹಾಗೂ ಕರಾಳ ಕಾನೂನಿನ ವಿರುದ್ಧ ಜಾತ್ಯಾತೀತ ಮನೋಭಾವ ಹೊಂದಿದ ಸರ್ವರು ಹೋರಾಟದ ರಂಗಕ್ಕೆ ಇಳಿಯಬೇಕೆಂದು ಅವರು ಕರೆ ನೀಡಿದರು.

ಜೈ ಶ್ರೀರಾಮ್ ಹಾಗೂ ಜೈ ಹನುಮಾನ್ ಹೆಸರಿನಲ್ಲಿ ಹಾಗೂ‌ ಗೋಹತ್ಯೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹತ್ಯೆಯ ವಿರುದ್ದ ಹೋರಾಡುವುದು ಅಗತ್ಯ ಎಂದು ಶಾಕೀರ್ ಪುಂಜಾಲಕಟ್ಟೆಯವರು ಕತರ್ ನ ಲುಕ್ತಾ ದಲ್ಲಿ ನಡೆದ ಕಾರ್ನರ್ ಮೀಟ್ ಕಾರ್ಯಕ್ರಮದಲ್ಲಿ ಕರೆ ನೀಡಿದರು.

ಪ್ರಸಕ್ತ ಸನ್ನಿವೇಶದಲ್ಲಿ ನಡೆಯುತ್ತಿರುವ ಎನ್ ಆರ್ ಸಿ, ಉಎಪಿಎ ಕಾಯ್ದೆಯಂತಹ ಕರಾಳ ಕಾನೂನು, ತ್ರಿವಳಿ ತಲಾಖ್ ಬಿಲ್ ಹಾಗೂ ಮುಸ್ಲಿಮ್ ಧಾರ್ಮಿಕ ನೇತಾರರನ್ನು ಭಯೋತ್ಪಾದಕರೆಂಬಂತೆ ಚಿತ್ರೀಕರಿಸುವ ಷಡ್ಯಂತ್ರದ ಬಗ್ಗೆ ಜಾಗೃತರಾಗಬೇಕೆಂದು ಜಲೀಲ್ ಮದೀನ ಖಲೀಫತ್ ನಲ್ಲಿ ನಡೆದ ಕಾರ್ನರ್ ಮೀಟ್ ನಲ್ಲಿ ವಿವರಿಸಿದರು.

ಇಮ್ರಾನ್ ದೇರಳಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಕ್ಯೂಐಎಸ್ಎಫ್ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News