ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಆಧರಿತ ವೃತ್ತಿಪರತೆ ಮೂಡಿಸುವ ಗುರಿ: ಡಾ.ಪಾಂಡುರಂಗ ಶೆಟ್ಟಿ

Update: 2019-09-11 17:36 GMT

ಬೆಂಗಳೂರು, ಸೆ. 11: ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಉತ್ಸುಕರಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಆಧರಿತ ವೃತ್ತಿಪರತೆ ಮೂಡಿಸುವ ಗುರಿ ಹೊಂದಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಿಗೆ ಅಳವಡಿಸಬಲ್ಲ ಜ್ಞಾನ ಮತ್ತು ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಿದ್ದು, ಉದ್ಯಮ ಕೇಂದ್ರಿತ ತರಬೇತಿ ಮತ್ತು ಸಂಶೋಧನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಮುಂದಿನ ಹತ್ತು ವರ್ಷಗಳಲ್ಲಿ ಆರ್‌ವಿ ಸ್ಕಿಲ್ಸ್ 1ಲಕ್ಷ ಮಂದಿ ಉದ್ಯಮಿಗಳಾಗುವ ಆಕಾಂಕ್ಷಿಗಳಿಗೆ ವೃತ್ತಿಪರತೆ ಬೇಕಿದೆ. ತಂತ್ರಜ್ಞಾನ ವೇಗವಾಗಿ ಮುಂದುವರೆಯುತ್ತಿದ್ದು, ಆ ವೇಗಕ್ಕೆ ತಕ್ಕಂತೆ ಮುನ್ನಡೆಯುವುದು ಸ್ಪರ್ಧಾತ್ಮಕವಾಗಿ ಉಳಿಯಲು ಅತ್ಯಂತ ಅಗತ್ಯ ಎಂದರು. ಈ ವೇಳೆ ಸಿಇಓ ವೆಂಕಟೇಶ್ ಪ್ರಸಾದ್, ಎಂ.ಡಿ.ಮನು ಸಾಳೆ, ಅನಂತ ಕಿನ್ನಾಳ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News