ಸಾರ್ವಜನಿಕ ಸೇವಾ ವಾಹನ ಚಾಲಕರು ಸಮವಸ್ತ್ರ ಧರಿಸದಿದ್ದರೆ ದಂಡ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2019-09-12 17:15 GMT

ಬೆಂಗಳೂರು, ಸೆ.12: ಹೊಸ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮದ ಅನ್ವಯ ಸಾರ್ವಜನಿಕ ಸೇವಾ ವಾಹನಗಳ ಚಾಲಕರು ಸಮವಸ್ತ್ರದ ಶಿಸ್ತು ಉಲ್ಲಂಘಿಸಿದರೆ ದಂಡ ವಸೂಲಿ ಮಾಡಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ವಾಹನಗಳಾದ ಕಾರು, ಬೈಕ್‌ಗಳನ್ನು ಯಾವುದೇ ಉಡುಪು ಧರಿಸಿ ಸವಾರಿ ಮಾಡಬಹುದು. ಯಾವುದೇ ಅಭ್ಯಂತರವಿಲ್ಲ. ಆದರೆ, ಆಟೊರಿಕ್ಷಾ ಸೇರಿದಂತೆ ಯಾವುದೇ ಸಾರ್ವಜನಿಕ ಸೇವಾ ವಾಹನಗಳಿಗೆ ಅದರದ್ದೇ ಆದ ಸಮವಸ್ತ್ರವಿದೆ ಎಂದರು.

ಸೇವೆ ಸಲ್ಲಿಸುವ ವಾಹನಗಳ ಮೇಲೆ ಸಾಮಾಜಿಕ ಜವಾಬ್ದಾರಿ ಇದೆ. ಮೋಟಾರು ವಾಹನ ಕಾಯ್ದೆಯಡಿಯೇ ಸಮವಸ್ತ್ರ ಕುರಿತು ಉಲ್ಲೇಖ ಮಾಡಲಾಗಿದೆ. ಇದಕ್ಕೆ ಎಲ್ಲರೂ, ನಿಯಮ ಪಾಲನೆ ಮಾಡಬೇಕು. ಒಂದು ವೇಳೆ, ತಪ್ಪು ಕಂಡು ಬಂದಲ್ಲಿ, ಇಲಾಖೆಯೂ ಕಾನೂನು ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News