ದುಬೈ: ನ.1ರಂದು ಕಾವಳಕಟ್ಟೆ ಅಲ್ ಖಾದಿಸದಿಂದ ಮೀಲಾದ್ ಸಮಾವೇಶ

Update: 2019-09-13 04:47 GMT

ದುಬೈ, ಸೆ.13: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಲೌಕಿಕ, ಧಾರ್ಮಿಕ ವಿದ್ಯಾಸಂಸ್ಥೆ ಅಲ್ ಖಾದಿಸ ಎಜುಕೇಶನಲ್ ಅಕಾಡಮಿ ಇದರ ದುಬೈ ಮತ್ತು ಶಾರ್ಜಾ ಸಮಿತಿಯ ಜಂಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ) ರ ಜನ್ಮ ದಿನಾಚರಣೆಯ ಪ್ರಯುಕ್ತ ಮೀಲಾದ್ ಸಮಾವೇಶ ನವೆಂಬರ್ 1ರಂದು ಸಂಜೆ 6 ಗಂಟೆಗೆ ಬರ್ ದುಬೈ ಹಾಲಿಡೇ ಇನ್ ಹೋಟೆಲ್ ನ ಸಭಾಂಗಣದಲ್ಲಿ ನಡೆಯಲಿದೆ.

ಅಲ್ ಖಾದಿಸ ಎಜುಕೇಶನಲ್ ಅಕಾಡಮಿಯ ಅಧ್ಯಕ್ಷ ಡಾ.ಮುಹಮ್ಮದ್ ಫಾಝಿಲ್ ರಝ್ವಿ (ಕಾವಲಕಟ್ಟೆ  ಹಝ್ರತ್) ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಪಾಡಂದರ ಮರ್ಕಝ್ ಅಧ್ಯಕ್ಷ ಡಾ:ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ ಶೂಲ ಮುಖ್ಯ ಭಾಷಣ ಮಾಡಲಿದ್ದಾರೆ.

ಸಮಾವೇಶದಲ್ಲಿ ಸಲೀಂ ಜೌಹರಿ ಕೊಲ್ಲಂ ನೇತೃತ್ವದ ಮಕ್ದೂಮಿಯ್ಯ ಬುರ್ದಾ ಇಕ್ವಾನ್ ಖಾದಿಸಿಯ್ಯ ತಂಡದಿಂದ ಬುರ್ದಾ ಮಜ್ಲಿಸ್ ನಡೆಯಲಿದ್ದು, ಸಲೀಂ ಖಾದ್ರಿ ಉಜಿರೆಯವರಿಂದ ಅತ್ಯಾಕರ್ಷಕ ನಆತ್ ಆಲಾಪನೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅಲ್ ಖಾದಿಸ ಇಸ್ಲಾಮಿಕ್ ಸಯನ್ಸ್ ನ ಪ್ರಾಂಶುಪಾಲ ಹಾಫಿಝ್ ಸುಫ್ಯಾನ್ ಸಖಾಫಿ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ನವೆಂಬರ್ 1ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News